ಪುತ್ತೂರು: ಅನ್ಸಾರಿಯಾ ಜುಮಾ ಮಸ್ಜಿದ್ ಮಂಜ ಇದರ ಆಶ್ರಯದಲ್ಲಿ ರಂಝಾನ್ ಪ್ರಭಾಷಣ ಹಾಗೂ ಇಫ್ತಾರ್ ಕೂಟ ಮಾ.16ರಂದು ಮಂಜ ದರ್ಗಾ ವಠಾರದಲ್ಲಿ ನಡೆಯಿತು. ಹಾಫಿಲ್ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್ ದುವಾಶೀರ್ವಚನ ನೀಡಿದರು. ಮಂಜ ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಅಧ್ಯಕ್ಷತೆ ವಹಿಸಿದ್ದರು. ಅಸರ್ ನಮಾಜಿನ ಬಳಿಕ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ರಂಝಾನ್ ಪ್ರಭಾಷಣ ನಡೆಸಿದರು.
ವೇದಿಕೆಯಲ್ಲಿ ಅಬ್ಬಾಸ್ ಸಅದಿ ಡೆಮ್ಮಂಗರ, ಸಿದ್ದೀಕ್ ಮಿಸ್ಬಾಹಿ ಕನ್ಯಾನ, ಅಬೂ ಶಝ ಕೂರ್ನಡ್ಕ, ಹಾಫಿಳ್ ಶರೀಫ್ ಸಖಾಫಿ ಉಕ್ಕುಡ, ಬದ್ರುದ್ದೀನ್ ಅಝ್ಹರಿ, ಹಾಫಿಲ್ ಉಮ್ಮರ್ ಫಾರೂಕ್ ಸಖಾಫಿ, ಇಬ್ರಾಹಿಂ ಕೌಸರಿ, ನಾಸಿರ್ ರಝ್ವಿ ಸಾರ್ಯ, ಎಂ.ಎಸ್ ಮುಹಮ್ಮದ್, ರಶೀದ್ ಪಾಲಕ್ಕಾಡ್, ರಾಶಿದ್ ಸಖಾಫಿ, ರವೂಫ್ ಹಾಶಿಮಿ, ಹಮೀದ್ ಹಾಜಿ ಕೊಡುಂಗಾಯಿ, ಸಿದ್ದೀಕ್ ಫೈಝಿ ಮುಕ್ರಂಪಾಡಿ ಉಪಸ್ಥಿತರಿದ್ದರರು. ಕಾರ್ಯಕ್ರಮದಲ್ಲಿ ವಿವಿಧ ಕಡೆಗಳಿಂದ ನೂರಾರು ಮಂದಿ ಭಾಗಿಯಾಗಿದ್ದರು.
