ಪುತ್ತೂರು: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕಡಮಜಲು ನಿವಾಸಿ ಲಕ್ಷ್ಮೀಶ ಕೆ.ರವರಿಗೆ ಕೆದಂಬಾಡಿ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಯೋಧರಿಗೆ ಶಾಲು,ಪೇಟಾ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು, ಕೆದಂಬಾಡಿ ಗ್ರಾಪಂ ಸದಸ್ಯ ಮೆಲ್ವಿನ್ ಮೊಂತೆರೋ, ಕಾಂಗ್ರೆಸ್ ಮುಖಂಡರಾದ ನೌಶಾದ್ ತಿಂಗಳಾಡಿ, ಹಾರಿಶ್ ಬೋಳೋಡಿ, ಶಾಫಿ ಬೇರಿಕೆ, ಶರೀಫ್ ತ್ಯಾಗರಾಜೆ, ವಲಯ ಕಾರ್ಯದರ್ಶಿ ಸೋಮಯ್ಯ ತಿಂಗಳಾಡಿ, ಆದಂ ಕೆ.ಟಿ, ರಫೀಕ್ ತ್ಯಾಗರಾಜೆ, ತಾರಾನಾಥ ರೈ ಕುರಿಕ್ಕಾರ ಮತ್ತಿತರರು ಉಪಸ್ಥಿತರಿದ್ದರು. ವಲಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಸ್ವಾಗತಿಸಿ, ಮೆಲ್ವಿನ್ ಮೊಂತೆರೋ ವಂದಿಸಿದರು.