ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಈಶ್ವರಮಂಗಲ ಪಾಳ್ಯತ್ತಡ್ಕ ತರ್ಬಿಯತುಲ್ ಅನಾಂ ಮದ್ರಸ ಶೇ.100 ಫಲಿತಾಂಶ ಪಡೆದುಕೊಂಡಿದೆ.

ಐದನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಸಫಾ ಹನೀನ್ ಕೆ ಹಾಗೂ ಶಝ್ನಾ ಅವರು ಟಾಪ್ ಪ್ಲಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಒಂದು ವಿದ್ಯಾರ್ಥಿನಿ ಡಿಸ್ಟಿಂಕ್ಷನ್, ಮೂವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಎರಡು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಹದಿನಾಲ್ಕು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಶಿಫಾ ನಫೀಸಾ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಎರಡು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಮೂವರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಆಯಿಶಾ ಸನಾ ಪಿ.ಎಸ್, ಫಾತಿಮಾ ಫರ್ಹಾನ ಹಾಗೂ ಫಾತಿಮಾ ಮುಬಶ್ಶಿರ ಡಿಸ್ಟಿಂಕ್ಷನ್ ಪಡೆದಿದ್ದು ಉಳಿದ ಮೂವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಐದನೇ ತರಗತಿಯಲ್ಲಿ ಟೋಪ್ ಪ್ಲಸ್ ಪಡೆದ ಸಫಾ ಹನೀನ್ ಕೆ ಅವರು ಅಬ್ದುಲ್ ರಹ್ಮಾನ್ ಹೈತಮಿ ಕುಕ್ಕಾಜೆರವರ ಪುತ್ರಿ. ಶಝ್ನ ರವರು ಅಡೀಲು ಸುಲೈಮಾನ್ ಮಿಸ್ಬಾಹಿರವರ ಪುತ್ರಿ.