ಪುತ್ತೂರು: ಬನ್ನೂರು ಮೇಲ್ಮಜಲು ನಿವೃತ್ತ ಸೈನಿಕ ದಿ.ಪೀಟರ್ ಗೊನ್ಸಾಲ್ವಿಸ್ ರವರ ಪತ್ನಿ ಬನ್ನೂರು ಪಂಚಾಯತ್ ನಲ್ಲಿ ಎರಡು ಅವಧಿಗೆ ಸದಸ್ಯರಾಗಿರುವ ಸಿಸಿಲಿಯಾ(ಪಾಯಿಸ್) ಗೊನ್ಸಾಲ್ವಿಸ್(95ವ.) ರವರು ಅಸೌಖ್ಯದಿಂದ ಮಾ.18 ರಂದು ನಿಧನ ಹೊಂದಿದ್ದಾರೆ.
ಮೃತರು ಪುತ್ರರಾದ ಎವರೆಸ್ಟ್ ಗೊನ್ಸಾಲ್ವಿಸ್, ಅಲೆಕ್ಸ್ ಗೊನ್ಸಾಲ್ವಿಸ್, ತೋಮಸ್ ಗೊನ್ಸಾಲ್ವಿಸ್, ಹಿಲರಿ ಗೊನ್ಸಾಲ್ವಿಸ್, ಸೊಸೆಯಂದಿರಾದ ವೆರೋನಿಕಾ, ಸೆಲೆಸ್ತಿನ್, ಜಾನೆಟ್, ಜೆಸಿಂತಾ, ವಿಲ್ಮಾ, ಸುನೀತಾ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಮಾ.20 ರಂದು ಪೂರ್ವಾಹ್ನ ಬನ್ನೂರು ಸಂತ ಅಂತೋನಿ ಚರ್ಚ್ ನ ಆನೆಮಜಲು ಸಿಮೆತರಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.