ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆಯ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.20 ಮತ್ತು 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.೨೦ರಂದು ಬೆಳಿಗ್ಗೆ ವೇದಮೂರ್ತಿ ದಿನೇಶ ಮರಡಿತ್ತಾಯರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಸಾಯಂಕಾಲ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ ನಡೆಯಲಿದೆ. ಮಾ.21ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ, ಧೂಮಾವತಿ ದೈವದ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಅಪರಾಹ್ನ ಬ್ರಾಂತಾಯ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಮೊಡಪ್ಪಾಡಿಗುತ್ತು ಕುಟುಂಬಸ್ಥರು ಹಾಗೂ ಬಂಧುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.