ಪುತ್ತೂರು:ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಎಸ್.ಎಸ್.ಯೂನಿಟ್ ಫಸ್ಟ್ ಯೋಜನಾಧಿಕಾರಿಯಾಗಿರುವ ಶ್ರೀಮತಿ ಚಿತ್ರಲೇಖ ಕೆ.ಎಸ್.ಅವರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ' ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಇವರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರವು 2022-23ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಮಾ.18ರಂದು ಬೆಂಗಳೂರಿನ ಗಾಜಿನ ಮನೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಸುಳ್ಯ ಎನ್ಎಂಸಿ ಎನ್ಎಸ್ಎಸ್ ಘಟಕಕ್ಕೆ ರಾಜ್ಯಮಟ್ಟದ
ಅತ್ಯುತ್ತಮ ಎನ್ಎಸ್ಎಸ್ ಘಟಕ’ ಪ್ರಶಸ್ತಿ ಲಭಿಸಿದ್ದು ಪ್ರಾಂಶುಪಾಲ ಡಾ|ಎಂ.ಎಂ.ರುದ್ರಕುಮಾರ್ ಅವರು ಇದೇ ಸಂದರ್ಭ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು.
ಚಿತ್ರಲೇಖರವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಎನ್ಎಸ್ಎಸ್ ಘಟಕಾಧಿಕಾರಿಗಳು,ಎನ್ಎಸ್ಎಸ್ ನಾಯಕರು,ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿ ಶುಭಹಾರೈಸಿದ್ದಾರೆ.
2007ರಲ್ಲಿ ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿಗೆ ಸೇರ್ಪಡೆಯಾಗಿದ್ದ ಚಿತ್ರಲೇಖ ಕೆ.ಎಸ್.ಅವರು 2010ರಿಂದ ಅಲ್ಲಿ ಎನ್ಎಸ್ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.2017ರಲ್ಲಿ ಎನ್ಎಂಸಿಗೆ ಸೇರಿದ್ದ ಇವರು ಅಲ್ಲಿಯೂ ಎಸ್ಎಸ್ಎಸ್ ಅಧಿಕಾರಿಯಾಗಿ ಮುಂದುವರಿದರು.
ಕಳೆದ ಸೆಪ್ಟೆಂಬರ್ನಲ್ಲಿ ಇವರಿಗೆ ಮಂಗಳೂರು ವಿವಿ ಮಟ್ಟದ `ಅತ್ಯುತ್ತಮ ಎನ್ಎಸ್ಎಸ್ ಅಧಿಕಾರಿ’ ಪ್ರಶಸ್ತಿ ಲಭಿಸಿತ್ತು.ಇಲ್ಲಿನ ಬಪ್ಪಳಿಗೆ ದಿ.ಸೀತಾರಾಮ ಸುವರ್ಣ ಮತ್ತು ಪದ್ಮಾವತಿ ದಂಪತಿಯ ಪುತ್ರಿಯಾಗಿರುವ ಇವರು ಈಶ್ವರಮಂಗಲ ಮೆಸ್ಕಾಂ ಪವರ್ಮ್ಯಾನ್ ಕೆದಂಬಾಡಿ ಗ್ರಾಮದ ಬೋಳೋಡಿ ಗಂಗಾಧರ ಪೂಜಾರಿಯವರ ಪತ್ನಿ.