ಪುತ್ತೂರು: ಸಾಮೆತ್ತಡ್ಕ ನಿವಾಸಿ ನಿವೃತ್ತ ಹೆಡ್ಕಾನ್ಸ್ಟೇಬಲ್ ದೇವರಾಯ ಹೆಚ್(80ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.15ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ದೇವರಾಯ ಹೆಚ್ ಅವರು ತಮ್ಮ ಸೇವಾವಧಿಯಲ್ಲಿ ವಿಟ್ಲ, ಸುಳ್ಯ, ಶಿರ್ವ, ಕಾಪು ಮತ್ತು ಮಂಗಳೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ ಮತ್ತು ಸಿಬ್ಬಂದಿಗಳು ಮೃತರ ಮನೆಗೆ ಆಗಮಿಸಿ ಅಂತಿಮ ಗೌರವ ಸಲ್ಲಿಸಿದರು.
ಮೃತರು ಪತ್ನಿ ಭಾನುಮತಿ, ಪುತ್ರಿ ರಶ್ಮಿ ಸತೀಶ್, ಪುತ್ರರಾದ ರಾಜೇಶ್, ರಾಕೇಶ್, ಸೊಸೆ ರಾಕಿ, ಅಳಿಯ ಸತೀಶ್ ಕುಮಾರ್ ಕ್ಯಾಂಪ್ಕೊ ದರ್ಬೆ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಬಂಧು ಮಿತ್ರರು ಆಗಮಿಸಿ ಸಂತಾಪ ಸೂಚಿಸಿದರು.