ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಮಾ.21ರಿಂದ 28ರ ತನಕ ನಡೆಯುವ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪೂರ್ವ ಸಿದ್ಧತಾ ತಯಾರಿ ಬಗ್ಗೆ ಸಭೆಯು ಶ್ರೀ ಕ್ಷೇತ್ರ ದೇವಾಲಯದ ಸಭಾಂಗಣದಲ್ಲಿ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಇದರ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಇವರ ಅಧ್ಯಕ್ಷತೆಯಲ್ಲಿ ದೇವಾಲಯದ ಸಭಾಂಗಣದಲ್ಲಿ ಮಾ.18ರಂದು ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಶ್ರೀ ಕ್ಷೇತ್ರ ಕೆಯ್ಯೂರು ದೇವಾಲಯದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ಕ್ಷೇತ್ರದ ಅರ್ಚಕ ಶ್ರೀನಿವಾಸ ರಾವ್, ಸುಜಯ ಕೆಯ್ಯೂರು, ಉಮಾಕಾಂತ ಬೈಲಾಡಿ, ಅಶೋಕ್ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಜಾತ್ರೋತ್ಸವದ ಉಪಸಮಿತಿಗಳ ಸಂಚಾಲಕರಾದ ಶರತ್ ಕುಮಾರ್ ಮಾಡಾವು, ರಾಮಕೃಷ್ಣ ಭಟ್ ಮೆರ್ಲ, ದೇವಣ್ಣ ನಾಯ್ಕ, ಜಯಂತ ಪೂಜಾರಿ ಕೆಂಗುಡೇಲು, ಪ್ರವೀಣ್ ಕಟ್ಟತ್ತಾರು, ಗೋಪಾಲಕೃಷ್ಣ ಸಂತೋಷ್ ನಗರ, ಸಮಿತಿಯ ಸದಸ್ಯರುಗಳಾದ ವೆಂಕಟರಮಣ ಭಟ್ ಅರೆಪಳ, ಮಧುಸೂದನ ಭಟ್ ಕಜೆಮೂಲೆ, ಗಣೇಶ್ ಭಟ್ ಕೈತ್ತಡ್ಕ, ವೇಣುಗೋಪಾಲ್ ಭಟ್, ವಿಶ್ವೇಶ್ವರ ಭಟ್, ವಿನಿತ್ ರೈ ದೇರ್ಲ, ಮೀನಾಕ್ಷಿ ವಿ.ರೈ, ಸುಶೀಲಾ ಕೆಯ್ಯೂರು, ಕೊರಗಪ್ಪ ಪೂಜಾರಿ, ದೇವಾಲಯದ ನೌಕರರಾದ ಚಂದ್ರಶೇಖರ್ ರೈ ಕಜೆ, ಜಯಕಾಂತ ಕುಲಾಲ್ ಕಟ್ಟತ್ತಾರು ಉಪಸ್ಥಿತರಿದ್ದರು.