*ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಗೈರು
*ಬಡಗನ್ನೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ತರಾಟೆ
ಬಡಗನ್ನೂರು: ಬಡಗನ್ನೂರು ಗ್ರಾಮ ಸಭೆ ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ಮಾ.19ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಲು ಇಲಾಖೆಯಿಂದ ದೊರಕುವ ಸೌಲಭ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಭೆಗೆ ಗೈರು ಹಾಜರಿಯಾಗಿದ್ದ ಕೃಷಿ ಮತ್ತು ತೋಟಗಾರಿಕಾಧಿಕಾರಿಗಳ ಬಗ್ಗೆ ಸದಸ್ಯ ಸಂತೋಷ್ ಆಳ್ವ ಗಿರಮನೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನರು ಕೃಷಿಕರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ತೋಟಕ್ಕೆ ಎಲೆಚುಕ್ಕಿ, ಹಳದಿ ರೋಗ ಇತ್ಯಾದಿ ಹರಡಿಕೊಂಡಿದ್ದುರಿಂದ ಕೃಷಿರು ಕಂಗಳಾಗಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖಾಧಿಕಾರಿಗಳು ಇರುತ್ತಿದ್ದರೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಿತ್ತು. ಅವರ ಗೈರು ಹಾಜರಿ ಕೃಷಿಕರಿಗೆ ಸಮಸ್ಯೆಯಾಗಿದೆ. ರೈತರಿಗೆ ಅಗತ್ಯ ಮಾಹಿತಿ ಸಿಗದೆ ಇರುವುದು ವಿಷಾದ ವ್ಯಕ್ತಪಡಿಸಿದರು.
ಈ ಬಗ್ಗೆ ಪಿಡಿಓ ಬಿ.ಸಿ ಸುಬ್ಬಯ್ಯ ಮಾತನಾಡಿ, ಎಲ್ಲಾ ಇಲಾಖೆಯವರಿಗೂ ಗ್ರಾಮ ಸಭೆ ನೋಟೀಸ್ ಕಳುಹಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಹೇಳಿ ನಿರ್ಣಯ ಮಾಡಿ ಇಲಾಖೆಗೆ ಕಳಿಸುವ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥ ಸುಬ್ಬಯ್ಯ ರೈ ಹಲಸಿನಡಿ ಇಲಾಖಾ ಅಧಿಕಾರಿಗಳು ಸಭೆಗೆ ಬಂದಲ್ಲಿ ನೇರ ಚರ್ಚಿಸುವುದರಿಂದ ಎಲ್ಲರಿಗೂ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೆಂಜ ಮುಡಿಪಿನಡ್ಕ ಬಸ್ ಬರುತ್ತಿಲ್ಲ ಅಧ್ಯಕ್ಷೆ ಪುಷ್ಪಲತಾ
ಪುತ್ತೂರು ಕೆ.ಎಸ್ ಆರ್.ಟಿ.ಸಿ ಡಿಪೋ ಮ್ಯಾನೇಜರ್ ಪುಂಡರಿಕಾ ಇಲಾಖಾ ಮಾಹಿತಿ ನೀಡದ ಸಂದರ್ಭದಲ್ಲಿ ರೆಂಜ ಮುಡಿಪಿನಡ್ಕ ಬಸ್ ಸಂಚಾರ ಸ್ಥಗಿತಗೊಂಡ ಬಗ್ಗೆ ವಿಷಯ ಪ್ರಸಾವಿಸಿ ಮಾತನಾಡಿ ಪುತ್ತೂರು – ರೆಂಜ ಮಾರ್ಗವಾಗಿ ಮುಡಿಪಿನಡ್ಕಕ್ಕೆ ದಿನದಲ್ಲಿ ಎರಡು ಭಾರಿ ಬೆಳಗ್ಗೆ ಮತ್ತು ಸಂಜೆ ಪ್ರಾರಂಭಗೊಂಡಿತು. ಅದರೆ ಈಗ ಕೆಲವು ಸಮಯದಿಂದ ಬರುತ್ತಿಲ್ಲ ಇದರಿಂದ ಬೆಟ್ಟಂಪ್ಪಾಡಿ ಪ್ರಥಮ ದರ್ಜೆ ಕಾಲೇಜು ಮತ್ತು ಇತರ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಸರಿಯಾದ ಸಮಯಕ್ಕೆ ತರಗತಿ ಹಾಜರಾಗಲು ಕಷ್ಟಕರವಾಗಿದೆ.ಅದು ಅಲ್ಲದೇ ಈಗ ಕೆಲವೊಂದು ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ. ತಕ್ಷಣ ಈ ಬಗ್ಗೆ ಕ್ರಮಕೈಗೊಂಡು ಬಸ್ ವ್ಯವಸ್ಥೆ ಆರಂಭ ಮಾಡುವಂತೆ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಅಧಿಕಾರಿರವರನ್ನು ಒತ್ತಾಯಿಸಿದರು. ಈ ಬಗ್ಗೆ ಮೆಲಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಬಸ್ ವ್ಯವಸ್ಥೆ ಕಲ್ಲಿಸುವ ಬಗ್ಗೆ ಭರವಸೆ ನೀಡಿದರು.
ಪುತ್ತೂರು- ಕೌಡಿಚ್ಚಾರು ಮಾರ್ಗವಾಗಿ ಸುಳ್ಯಪದವಿಗೆ ಬರುವ ಬಸ್ ಸಂಚಾರ ಅವಧಿ ಅರಂಭ ದಿನಗಳಲ್ಲಿ ಪುತ್ತೂರಿನಿಂದ 7 ಗಂಟೆಗೆ ಹೊರಟು 7.45 ಕ್ಕೆ ಸುಳ್ಯಪದವಿಗೆ ತಲುಪುತ್ತಿತ್ತು. ಬಳಿಕ 8 ಗಂಟೆಗೆ ಸುಳ್ಯಪದವಿನಿಂದ ಪುತ್ತೂರಿಗೆ ಹೊರಡುವ ಸಮಯವಾಗಿತ್ತು. ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿತ್ತು. ಆದರೆ ಈಗ 8 .15 ,20 ನಿಮಿಷ ತಡವಾಗಿ ಹೊರಡುತ್ತಿದೆ ಮತ್ತು ಕೆಲವೊಂದು ದಿನಗಳಲ್ಲಿ ಬಸ್ ಬಾರದೆ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಸಂಕಷ್ಟ ಸಿಲುಕಿದ್ದಾರೆ . ಆದರಿಂದ ಸುಳ್ಯಪದವಿನಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಸಮಯ ನಿಗದಿಪಡಿಸಬೇಕು ಎಂದು ಸದಸ್ಯ ಸಂತೋಷ್ ಆಳ್ವ ಅಧಿಕಾರಿ ಗಮನಕ್ಕೆ ತಂದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಹನುಮಗಿರಿ -ಶಾಂತದುರ್ಗಾ ಸಂಪರ್ಕ ರಸ್ತೆ ಸರಕಾರಿ ಬಸ್ ಕಲ್ಲಿಸಿ ಸಂತೋಷ್;-
ಧಾರ್ಮಿಕ ಕೇಂದ್ರ ಸಂಪರ್ಕ ಕೊಂಡಿಯಾಗಿರುವ ಈಶ್ವರಮಂಗಲ ಹನುಮಗಿರಿ- ಪಡುಮಲೆ- ನಿಡ್ಪಳ್ಲಿ ಶಾಂತದುರ್ಗಾ ರಸ್ತೆಯು ಮೂರು ಗ್ರಾಮಗಳ ಧಾರ್ಮಿಕ ಕೆಂದ್ರಗಳ ಸಂಪರ್ಕ ರಸ್ತೆಯಾಗಿದ್ದು ಪ್ರಧಾನ ಮಂತ್ರಿ ಸಡಕ್ ಯೋಜನೆ 7 ಕೋಟಿ ಅನುದಾನದಲ್ಲಿ ಉತ್ತಮ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಈ ರಸ್ತೆಯಲ್ಲಿ ಬಸ್ ಸಂಚಾರ ಅರಂಭಿಸಿದರೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕ ಹೆಚ್ಚು ಪ್ರಯೋಜನವಾಗಿದೆ. ಈ ನಿಟ್ಟಿನಲ್ಲಿ ಈ ರಸ್ತೆ ಯಲ್ಲಿ ಬಸ್ ಸಂಚಾರ ಆರಂಭಿಸುವಂತೆ ಗ್ರಾ.ಪಂ ಸದಸ್ಯ ಸಂತೋಷ್ ಆಳ್ವ ಅಧಿಕಾರಿ ಅವರಲ್ಲಿ ಮನವಿ ಸಲ್ಲಿಸಿದರು. ಈ ಬಗ್ಗೆ ಮ್ಯಾನೇಜರ್ ಪುಂಡರಿಕಾ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಪೇರಿಗೇರಿ- ಅಂಬಟೆಮೂಲೆ ಬಸ್ ಆರಂಭಿಸಿ
ಕಳೆದ ಸುಮಾರು 30 ವರ್ಷಗಳಿಂದ ಪೆರೀಗೇರಿ-ಅಂಬಟೆಮೂಲೆ ಸರಕಾರಿ ಬಸ್ ಓಡಾಡುತ್ತಿತ್ತು. ಆದರೆ ಈ ಕೆಲವು ಸಮಯಗಳಿಂದ ಬಸ್ ಓಡಾಟ ಸ್ಥಗಿತಗೊಂಡಿದೆ. ಇದರಿಂದ ಅಂಬಟೆಮೂಲೆ ಭಾಗದ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಗಮನಿಸಿ ಈ ಭಾಗದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಹಳೆಯ ವಿದ್ಯುತ್ ತಂತಿಗಳನ್ನು ತೆರವು ಮಾಡಲು ಮನವಿ
ಪಡುವನ್ನೂರು ಗ್ರಾಮದ ಕುದ್ಕಾಡಿ ಟಿ ಸಿ ವ್ಯಾಪ್ತಿ ಪ್ರದೇಶದಲ್ಲಿ ಹಳೆಯ ವಿದ್ಯುತ್ ತಂತಿಗಳು ಸವೆದು ಅಪಾಯದ ಅಂಚಿನಲ್ಲಿದೆ. ಅವುಗಳನ್ನು ತೆರವುಗೊಳಿಸಿ ಹೊಸ ತಂತಿ ಅಳವಡಿಸುವಂತೆ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ತಲು ಮೆಸ್ಕಾಂ, ಜೆ.ಇ ರವರ ಗಮನಕ್ಕೆ ತಂದರು. ಈ ಬಗ್ಗೆ ಬೆಟ್ಟಂಪ್ಪಾಡಿ ಜಿ.ಇ ಪುತ್ತು ಮಾತನಾಡಿ, ಬೆಟ್ಟಂಪ್ಪಾಡಿ ವಲಯದ ಸಂಬಂಧ ಪಟ್ಟ ಬಹುತೇಕ ಭಾಗದಲ್ಲಿ ಹಳೆಯ ವಿದ್ಯುತ್ ತಂತಿಗಳನ್ನು ತೆಗದು ಹೊಸ ತಂತಿ ಅಳವಡಿಕೆಮಾಡಲಾಗಿದೆ. ಕುದ್ಕಾಡಿ ಭಾಗದಲ್ಲಿ ಎರಡು ಟಿ.ಸಿಯಲ್ಲಿ ಒಂದು ಮಾತ್ರ ಬಾಕಿ ಇದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಿದೆ ಎಂದು ಹೇಳಿದರು.
ಕಂದಾಯ ಇಲಾಖೆ ವತಿಯಿಂದ ಬಡಗನ್ನೂರು ಗ್ರಾಮಾಡಳಿತಾಧಿಕಾರಿ ರಾಧಾಕೃಷ್ಣ ಇಲಾಖಾ ಮಾಹಿತಿ ನೀಡಿ ಮಾತನಾಡಿ ಜನನ ಮತ್ತು ಮರಣ ನೋಂದಣಿ ಈ ಮೊದಲು ಗ್ರಾಮಾಡಳಿತದಲ್ಲಿ ನೋಂದಣಿ ಮಾಡಲಾಗುತ್ತಿತ್ತು. ಮುಂದೆ ಗ್ರಾ.ಪಂ ನಲ್ಲಿ ಮಾಡಲಾಗುತ್ತದೆ. ಸಾರ್ವಜನಿಕರು ಜನನ ಮತ್ತು ಮರಣ ನೋಂದಣಿಯನ್ನು 7 ದಿವಸಗಳ ಮೊದಲು ನೋಂದವಣೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾಡು ಪ್ರಾಣಿಗಳಗೆ ನೀರಿನ ತೊಟ್ಟಿ ರಚಿಸಿ
ಕಾಡುಪ್ರಾಣಿಗಳ ಹಾವಳಿ ಕೃಷಿ ನಾಶ ಕುಡಿಯಲು ನೀರು ಹುಡುಕಾಡಕೊಂಡು ಕಾಡು ಬಿಟ್ಟು ನಾಡು ಸೇರುತ್ತದೆ. ಕಾಡಿನಲ್ಲಿ ಅಹಾರ ಬೇಕಾದಷ್ಟು ಇದೆ. ಬೇಸಿಗೆ ಬಿಸಿಲ ಬೇಗೆಗೆ ಕುಡಿಯಲು ನೀರು ಸಿಗುತ್ತಿಲ್ಲ ಇದರಿಂದ ನಾಡುಸೇರುತ್ತದೆ ಇದರಿಂದಾಗಿ ಕೃಷಿ ನಾಶ ಆಗುತ್ತದೆ ಈ ಬಗ್ಗೆ ಅರಣ್ಯ ಇಲಾಖೆ ಸಾಧ್ಯವಾದಷ್ಟು ಕಾಡುಬದಿಯಲ್ಲಿ ನೀರಿನ ತೊಟ್ಟಿ ರಚನೆ ಮಾಡಿದಲ್ಲಿ ಕಾಡುಪ್ರಾಣಿಗಳಿಂದ ಕೃಷಿ ನಾಶವನ್ನು ತಪ್ಪಿಸಬಹುದು ಎಂದು ಸದಸ್ಯ ಸಂತೋಷ್ ಅಳ್ವ ಹೇಳಿದರು. ಇವರೊಂದಿಗೆ ಸುಬ್ಬಯ್ಯ ರೈ ಹಲಸಿನಡಿ ಧ್ವನಿ ಗೂಡಿಸಿದರು. ಈ ಬಗ್ಗೆ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಇಲಾಖೆ ವತಿಯಿಂದ ಈ ರೀತಿಯ ಚಿಂತನೆ ಇದೆ. ಮುಂದೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾ.ಪಂ ವಸತಿ ರಹಿತ ಕುಟುಂಬ ವಸತಿ ನಿರ್ಮಾಣ ನಿಟ್ಟಿನಲ್ಲಿ ಸುಳ್ಯಪದವು ಕನ್ನಡ್ಕ ಭಾಗದಲ್ಲಿ ವಸತಿ ಮೂಲಸೌಕರ್ಯ ಒದಗಿಸಲು ಶಾಸಕರು ಸುಮಾರು 70 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. 4 ಎಕ್ರೆ ಜಾಗವನ್ನು ಲೆವೌಟ್ ಮಾಡಲು 30 ಲಕ್ಷ ಮತ್ತು ರಸ್ತೆ ಅಭಿವೃದ್ಧಿಗೆ 40 ಲಕ್ಷ ಒಟ್ಟು 70 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ನಮ್ಮಲ್ಲಿ 78 ಪಲಾನುಭವಿಗಳು ಅರ್ಜಿ ಹಾಕಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಮಾಹಿತಿ ನೀಡಿದರು.
ಕುಡಿಯುವ ನಲ್ಲಿ ನೀರು ಸಂಪರ್ಕ ಕಡಿತಗೊಳಿಸಿ ಲತಾ ಸುಳ್ಯಪದವು
ಪಡುವನ್ನೂರು ಗ್ರಾಮದ ಪದಡ್ಕ ಭಾಗದಲ್ಲಿ ಕೆಲವೊಂದು ಮನೆಯವರು ನಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಪಂಚಾಯತಿಗೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಮನೆಗೆ ನೀರು ಹೋಗುತ್ತಿದೆ ಅದರೆ ಬಿಲ್ ಬರುತ್ತಿಲ್ಲ. ತಕ್ಷಣ ನಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮಕೈಗೊಳುವಂತೆ ಪಿಡಿಓ ರವರನ್ನು ಒತ್ತಾಯಿಸಿದರು.
ಮಾರ್ಗದರ್ಶಿ ಅಧಿಕಾರಿಗಳಾಗಿ ಪುತ್ತೂರು ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿ ಮಾತನಾಡಿ ಗ್ರಾಮ ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಅರೋಗ್ಯಕರ ಚರ್ಚೆ ನಡೆದಿದೆ.
ನೀರಿನ ಬಿಲ್, ಮನೆ ತೆರಿಗೆ ಇತ್ಯಾದಿ ತೆರಿಗೆಯನ್ನು ಸಕಾಲದಲ್ಲಿ ಕಟ್ಟಿ ಸಹಕರಿಸಿದಲ್ಲಿ ಗ್ರಾಮದ ಅಭಿವೃದ್ಧಿ ಮಾಡಲು ಪ್ರೋತ್ಸಾಹ ದೊರಕಿದಂತಾಗುತ್ತದೆ ಎಂದ ಅವರು ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿ ಅಭಿಯಾನದಲ್ಲಿ ಬಡಗನ್ನೂರು ಗ್ರಾ.ಪಂ ಉತ್ತಮ ಕಾರ್ಯವೈಖರಿ ಮಾಡುವ ಮೂಲಕ ಗ್ರಾಮದ ಸ್ವಚ್ಚತೆ ಬಗ್ಗೆ ಮಾದರಿ ಗ್ರಾ.ಪಂ ಎಂದು ಹೇಳಿ ಅಭಿನಂದನೆ ಸಲ್ಲಿಸಿ, ಸ್ವಚ್ಛ ವಾಹಿನಿ ಚಾಲಕಿರವರನ್ನು ಪೋಷ್ ಎಂದು ಕೊಂಡಾಡಿದರು.
ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆ. ಗ್ರಾಮದ ಅಭಿವೃದ್ಧಿ ದಿಸೆಯಲ್ಲಿ ಅರೋಗ್ಯಕರ ಚರ್ಚೆ ನಡೆದಿದೆ. ನೀರಿನ ಕರ ಇತ್ಯಾದಿ ತೆರಿಗೆ ಪಾವತಿಸಿ ಗ್ರಾಮದ ಸರ್ವೋತ್ತಮ ಅಭಿವೃದ್ಧಿಗೆ ಕೈಜೋಡಿಸುವಂತೆ ವಿನಂತಿ ಮಾಡಿಕೊಂಡರು. ವಿವಿಧ ಇಲಾಖಾ ಅಧಿಕಾರಿ ಸೌಲಭ್ಯಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಅಳ್ವ ಗಿರಿಮನೆ, ವೆಂಕಟೇಶ್ ಗೌಡ ಕನ್ನಡ್ಕ, ಲಿಂಗಪ್ಪ ಗೌಡ ಮೋಡಿಕೆ, ಕುಮಾರ ಅಂಬಟೆಮೂಲೆ, ಧರ್ಮೇಂದ್ರ ಕುಲಾಲ್ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ಕೆಮನಡ್ಕ, ಸವಿತಾ ನೆರೋತ್ತಡ್ಕ, ಹೇಮಾವತಿ ಮೋಡಿಕೆ, ಸುಜಾತ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ ಉಪಸ್ಥಿತರಿದ್ದರು.
ಗ್ರಾ.ಪಂ ಡಾಟಾ ಕಾರ್ಯಕರ್ತೆ ಹೇಮಾವತಿ ಸಿ.ಯಚ್ ವರದಿ ಮಂಡಿಸಿದರು. ಅಭಿವೃದ್ಧಿ ಅಧಿಕಾರಿ ಬಿ.ಸಿ ಸುಬ್ಬಯ್ಯ ಜಮಾ ಖರ್ಚು ಗಳ ಮರದಿ ಮಂಡಿಸಿ, ಸ್ವಾಗತಿಸಿ ವಾದಿಸಿದರು. ಸಿಬ್ಬಂದಿಗಳು ಸಹಕರಿಸಿದರು.