ಎಪಿಎಂಸಿ ಯಾರ್ಡ್ನಲ್ಲಿ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿ : ಮಾತಿನ ಚಕಮಕಿ : ಠಾಣೆ ಮೆಟ್ಟಿಲೇರಿದ ಪ್ರಕರಣ

0

ಪುತ್ತೂರು: ಎಪಿಎಂಸಿ ಯಾರ್ಡ್ನಲ್ಲಿ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿ ಮಾಡುತ್ತಿರುವ ಘಟನೆಗಳು ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ವಿಚಾರಿಸಿದಾಗ ಮಾತಿನ ಚಕಮಕಿ ನಡೆದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಈ ಹಿಂದೆ ಪುತ್ತೂರು ಎಪಿಎಂಸಿ ಪ್ರಭಾರ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರು ಈಗಲೂ ಪುತ್ತೂರು ಎಪಿಎಂಸಿ ಯಾರ್ಡ್ನ ವಸತಿಗೃಹದಲ್ಲೇ ವಾಸ್ತವ್ಯ ಹೊಂದಿದ್ದಾರೆ. ರಾಮಚಂದ್ರ ಅವರು ಹಾಲಿ ಕಾರ್ಯದರ್ಶಿ ಎಂ.ಸಿ ಪಾಡಗಾನೂರು ಅವರ ವಸತಿಗೃಹಕ್ಕೆ ಹೋಗುವ ಕುಡಿಯುವ ನೀರಿನ ಪೈಪ್‌ನ್ನು ತುಂಡರಿಸಿದಲ್ಲದೆ ಅವರ ಪತ್ನಿ, ಮಗನಿಗೆ ಅವಾಚ್ಯ ಶಬ್ದದಿಂದ ನಿಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಾ.20ರಂದು ಮಧ್ಯಾಹ್ನದ ವೇಳೆ ಎಪಿಎಂಸಿ ಕಾರ್ಯದರ್ಶಿ ಹಾಗೂ ಅವರ ಪತ್ನಿ, ಮಗ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here