ಪುತ್ತೂರು: ಸಹಕಾರ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿರುವ ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯವನ್ನು ಪುತ್ತೂರಿನ ಒಂದೆರಡು ಆಸ್ಪತ್ರೆಯಲ್ಲಾದರೂ ಚಾಲ್ತಿಯಲ್ಲಿರುವಂತೆ ಮಾಡಿಕೊಡುವಂತೆ ಪುತೂರಿನ ದಿನೇಶ್ ಹೆಗ್ಡೆಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಯಶಸ್ವಿನಿ ವಿಮಾ ಸೌಲಭ್ಯವು ದ.ಕ.ಜಿಲ್ಲಾ ಪುತ್ತೂರು ತಾಲೂಕಿನ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ಯಶಸ್ವಿನಿ ಆರೋಗ್ಯ ವಿಮೆ ಹೊಂದಿರುವ ನಮಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಒಂದೆರಡು ಖಾಸಗಿ ಆಸ್ಪತ್ರೆಗಳಲ್ಲಿ ಆದರೂ ಯಶಸ್ವಿನಿ ಆರೋಗ್ಯ ವಿಮೆಯಾಗಿ ಚಿಕಿತ್ಸೆ ಪಡೆಯಲು ವ್ಯವಸ್ಥೆ ಮಾಡಿಕೊಡುವಂತೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್, ಎಲ್ಲಾ ಸಚಿವರಿಗೆ, ಮುಖ್ಯಮಂತ್ರಿಯವರಿಗೆ ದಿನೇಶ್ ಹೆಗ್ಡೆಯವರು ಮನವಿ ಮಾಡಿದ್ದಾರೆ.