ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ 12ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮಾ.20ರಂದು ಬೆಳಿಗ್ಗೆ ನಡೆಯಿತು.

ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ ನಡೆಯಿತು. ನಂತರ ದೈವಸ್ಥಾನದಲ್ಲಿ ಗಣಹೋಮ, ಕಲಶಪೂಜೆ ನಡೆಯಿತು. ನಂತರ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿ ದೈವ, ಕಲ್ಕುಡ, ಕಲ್ಲುರ್ಟಿ,ಗುಳಿಗ ದೈವಗಳಿಗೆ ಕಲಶಾಭಿಷೇಕ, ತಂಬಿಲ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರದ ಅರ್ಚಕರಾದ ಸುಕುಮಾರ ಯಡಪಡಿತ್ತಾಯ ಕೊಕ್ಕಡ ಹಾಗೂ ಇತರೇ ಪುರೋಹಿತರು ಸಹಕರಿಸಿದರು. ಆಡಳಿತ ಸಮಿತಿ ಉಪಾಧ್ಯಕ್ಷ ಜಗದೀಶ್ ಶೆಟ್ಟಿ ಕಡೆಂಬಿಲ, ಕಾರ್ಯದರ್ಶಿ ವಿಶ್ವಾಸ್ ಗೌಡ ಕಾಯರ್ತಡ್ಕ, ಜೊತೆ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಲಾಯಿ, ಸದಸ್ಯರಾದ ಪ್ರಕಾಶ್ ಸುವರ್ಣ ಕುರುಂಬೊಟ್ಟು, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು ಸೇರಿದಂತೆ ವಿವಿಧ ಸಮಿತಿ ಸದಸ್ಯರು, ಗ್ರಾಮಸ್ಥರು ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.