ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ಚುಚ್ಚುಮದ್ದು ಲಸಿಕೆ

0

ನಿಡ್ಪಳ್ಳಿ;ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಕಾರ್ಯಕ್ರಮದಡಿಯಲ್ಲಿ  ಮಕ್ಕಳಿಗೆ ಚುಚ್ಚುಮದ್ದು ನೀಡುವ ಮೂಲಕ ಚುಚ್ಚುಮದ್ದು ದಿನಾಚರಣೆ ಕಾರ್ಯಕ್ರಮ ಮಾ.18 ರಂದು ಬೆಟ್ಟಂಪಾಡಿ ಆರೋಗ್ಯ ಉಪಕೇಂದ್ರದಲ್ಲಿ ನಡೆಯಿತು.

 ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರಾದ ಯಶೋಧ, ಸೌಮ್ಯರವರು ಮಕ್ಕಳಿಗೆ ಚುಚ್ಚುಮದ್ದು ಹಾಕಿದರು.

 ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ, ಸದಸ್ಯರಾದ ಉಮಾವತಿ, ಚಂದ್ರಶೇಖರ ರೈ, ಮಹಾಲಿಂಗ ನಾಯ್ಕ, ಮೊಯಿದುಕುಂಞ, ಗೋಪಾಲ, ರಮ್ಯ, ಲಲಿತಾ,ಪಾರ್ವತಿ.ಎಂ, ಪಿಡಿಒ ಸೌಮ್ಯ, ಕಾರ್ಯದರ್ಶಿ ಬಾಬು ನಾಯ್ಕ, ಗ್ರಂಥ ಪಾಲಕಿ ಪ್ರೇಮಲತಾ, ಸಂಜೀವಿನಿ ಒಕ್ಕೂಟದ ಶಕುಂತಲಾ, ಚೈತ್ರಾ, ಕೃಷಿ ಸಖಿ ಸೌಮ್ಯ, ಪಶುಸಖಿ ಉಮಾಶ್ರೀ, ಪಂಚಾಯತ್ ಸಿಬ್ಬಂದಿಗಳಾದ ಸಂದೀಪ್,ಸವಿತಾ, ಚಂದ್ರಾವತಿ, ಆಶಾ ಕಾರ್ಯಕರ್ತೆಯರು, ಸ್ವಚ್ಚತಾ ಘಟಕದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.

  ಮಾ.19 ರಂದು ರಾಷ್ಟ್ರೀಯ ಸೇವಾ ದಳದ ಅಂಗವಾಗಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮತ್ತು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಮಹಿಳಾ ಅರಿವು ಕಾರ್ಯಕ್ರಮ ಬೆಟ್ಟಂಪಾಡಿ ಪಂಚಾಯತ್ ವಠಾರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here