ಕೂರ್ನಡ್ಕ: ಆರೋಪಿಯನ್ನು ವಶಕ್ಕೆ ಪಡೆಯಲು ಆಗಮಿಸಿದ ಕೇರಳ ಪೊಲೀಸರು : ಸ್ಧಳೀಯರಲ್ಲಿ ಗೊಂದಲ : ಪರಿಸ್ಧಿತಿ ತಿಳಿಗೊಳಿಸಿದ ಪುತ್ತೂರು ಪೊಲೀಸ್

0

ಪುತ್ತೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರನ್ನು ವಶಕ್ಕೆ ಪಡೆಯಲು ಕೇರಳ ಪೊಲೀಸರು ಪುತ್ತೂರು ಕೂರ್ನಡ್ಕಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರನ್ನು ನೋಡಿ ಸ್ಧಳೀಯರಲ್ಲಿ ಗೊಂದಲ ಉಂಟಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಬಳಿಕ ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ಗೊಂದಲ ನಿವಾರಿಸಿದ ಘಟನೆ ಪುತ್ತೂರು ಕೂರ್ನಡ್ಕ ಬಳಿ ಮಾ.20ರಂದು ನಡೆದಿದೆ.


ಕೇರಳದಲ್ಲಿ ಕೆಮ್ಮಿಂಜೆಯ ಕೂರ್ನಡ್ಕದ ಕಾಲಿದ್ ಎಂಬಾತ ಸಂಬಂಧಿಕರೋರ್ವರಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಮ್ಮಿಂಜೆಯ ಕೂರ್ನಡ್ಕಕ್ಕೆ ಆತನನ್ನು ವಶಕ್ಕೆ ಪಡೆಯಲು ಕೇರಳ ಪೊಲೀಸರು ಬಂದಿದ್ದರು. ಈ ವೇಳೆ ಅಲ್ಲಿ ಗೊಂದಲದ ವಾತಾವರಣ ಉಂಟಾಗಿ ಸ್ಧಳೀಯರ ಹಾಗೂ ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾಹಿತಿ ಪಡೆದ ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ನಿವಾರಿಸಿದ್ದಾರೆ.

LEAVE A REPLY

Please enter your comment!
Please enter your name here