ಪುತ್ತೂರು: ಕಾರ್ಕಳ ಮಿಯ್ಯಾರುನಲ್ಲಿ ನಡೆದ ಜೋಡುಕೆರೆ ಕಂಬಳ ಕೂಟದ ನೇಗಿಲು ಹಿರಿಯ ವಿಭಾಗದಲ್ಲಿ (11.65) ದ್ವಿತೀಯ ಬಹುಮಾನವನ್ನು ಪಡೆದ ಕಿಶೋರ್ ಪೂಜಾರಿ ಕುಂಡಡ್ಕ ವಿಟ್ಲ ಇವರನ್ನು ಮುಕ್ರಂಪಾಡಿ ಟ್ರಸ್ಟ್‌ನ ಕಚೇರಿಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮಾ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ನಗರ ಮಂಡಲದ ಪ್ರಧಾನಕಾರ್ಯದರ್ಶಿ ಅನಿಲ್ ತೆಂಕಿಲ, ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ, ಟೌನ್ ಬ್ಯಾಂಕ್ ನಿರ್ದೇಶಕ ರಾಜು ಶೆಟ್ಟಿ, ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮರುವಾಳ, ಪ್ರವೀಣ್ ಭಂಡಾರಿ, ಶನ್ಮಿತ್ ರೈ ಕುಂಬ್ರ , ಪ್ರಜ್ವಲ್ ಘಾಟೆ, ಮನೀಶ್ ಕುಲಾಲ್, ಪ್ರಕಾಶ್ ಚಿಕ್ಕಮುಡ್ನೂರು, ಶ್ರೀಕಾಂತ್ ಆಚಾರ್, ಉದಯ ಬಲ್ಲಾಳ್ ಉಪಸ್ಥಿತರಿದ್ದರು.