





ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದ ಆಶ್ರಯದಲ್ಲಿ ಯಕ್ಷಾಭಿಮಾನಿ ಬಳಗ ಸರ್ವೆ, ಪುತ್ತೂರು, ಕೆದಂಬಾಡಿ ಇದರ ಸಹಕಾರದೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮಾ.24ರಂದು ಸಂಜೆ ಶ್ರೀರಾಮ ಮಂದಿರ ಸನ್ಯಾಸಿಗುಡ್ಡೆಯಲ್ಲಿ ‘ ಶ್ರೀ ಹರಿದರ್ಶನ’ ಹಿರಣಾಕ್ಷ ವಧೆ, ಭಕ್ತಪ್ರಹ್ಲಾದ, ಸುಧನ್ವಾರ್ಜುನ ಎಂಬ ಕಥಾಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿ ತೋರಿಸಲಿರುವರು. ಸಂಜೆ 6 ಗಂಟೆಗೆ ಚೌಕಿ ಪೂಜೆ ನಡೆಯಲಿದ್ದು ರಾತ್ರಿ 8 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಯಕ್ಷಗಾನ ಪ್ರೇಮಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನ ವೀಕ್ಷಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು, ಭಜನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




 
            
