ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಡಾ.I ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇದರ ಸಹಯೋಗದಲ್ಲಿ, ಸಮಾಜ ಕಾರ್ಯ ವಿಭಾಗ ಮತ್ತು ಪ್ರಜ್ಞಾಶ್ರಮ ಬೌದ್ಧಿಕ ದಿವ್ಯಾಂಗರ ವಸತಿಯುಕ್ತ ಕೇಂದ್ರ ಬೀರಮಲೆ ಬೆಟ್ಟ ಪುತ್ತೂರು ಇವುಗಳ ಸಯುಕ್ತ ಆಶ್ರಯದಲ್ಲಿ “ಒತ್ತಡ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆ” ಕಾರ್ಯಕ್ರಮವು ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಮಾನಸಿಕ ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ದೈವದೇವರ ಮೇಲಿಡುವ ನಂಬಿಕೆಯೂ ಫಲಕಾರಿಯಾಗಬಹುದು ಎಂದು ಹೇಳಿದರು. ಹಾಗೆ ವಿಶೇಷ ಚೇತನರ ವಿವಿದೋದ್ದೇಶ ಪುನರ್ವಸತಿ ಪುತ್ತೂರು ತಾಲೂಕು ಇಲ್ಲಿಯ ಕಾರ್ಯಕರ್ತರಾದ ನವೀನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಬೀಳುವ ಒತ್ತಡ ಮತ್ತು ಮಾನಸಿಕ ಖಿನ್ನತೆಯ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಕಿಶೋರ್ ಕುಮಾರ್ ರೈ ಮತ್ತು ಮೇಘಶ್ರೀ ಉಪಸ್ಥಿತರಿದ್ದರು.
ಡಾ.| ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಗಿರೀಶ್ ಸಿ ಆರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿಯ ವಿದ್ಯಾರ್ಥಿಗಳಾದ ಅಶೋಕ್ ಸ್ವಾಗತಿಸಿ, ಲಿಖಿನ್ ವಂದಿಸಿದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿ ಕೀರ್ತನ್ ಕೃಷ್ಣ ಪ್ರಾರ್ಥಿಸಿದರು. ಕುಮಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.