ನಿಡ್ಪಳ್ಳಿ; ಸಾರ್ವಜನಿಕ ಸ್ಥಳದಲ್ಲಿ ಚರಂಡಿಗೆ ತ್ಯಾಜ್ಯ ಎಸೆದ ವ್ಯಕ್ತಿಯೋರ್ವರಿಗೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ದಂಡದ ಬಿಸಿ ಮುಟ್ಟಿದ್ದಲ್ಲದೆ, ಆತನಿಂದಲೇ ಕಸವನ್ನು ತೆಗೆಸಿದ ಘಟನೆ ವಿಜಯನಗರದಲ್ಲಿ ಮಾ.21ರಂದು ನಡೆಯಿತು.
ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಪಾದಚಾರಿ ಒಬ್ಬರು ರಸ್ತೆ ಬದಿಯ ಚರಂಡಿಗೆ ತ್ಯಾಜ್ಯ ತುಂಬಿದ ಕಟ್ಟನ್ನು ಎಸೆದು ಹೋದದ್ದನ್ನು ನೋಡಿದ ಸಾರ್ವಜನಿಕರು ಪಂಚಾಯತ್ ಪಿಡಿಒಗೆ ಮಾಹಿತಿ ನೀಡಿದರು. ತಕ್ಷಣ ಆ ವ್ಯಕ್ತಿಯನ್ನು ಪತ್ತೆಹಚ್ಚಿ ಪಂಚಾಯತಿಗೆ ಕರೆಸಲಾಯಿತು. ನಂತರ ಅವರಿಂದಲೇ ಆ ತ್ಯಾಜ್ಯವನ್ನು ತೆಗೆಸಿ ರೂ.1000 ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು. ಕಂಡ ಕಂಡಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಸಂಧ್ಯಾಲಕ್ಷ್ಮೀ ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ನಿಡ್ಪಳ್ಳಿ; ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆತ – ಎಸೆದವರಿಂದಲೇ ತೆಗೆಸಿ ದಂಡ ವಿಧಿಸಿದ ಪಂಚಾಯತ್