ಮಾ.24-25 ವೀರಮಂಗಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

0

ಪುತ್ತೂರು: ವೀರಮಂಗಲದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಕೊರಗಜ್ಜ ದೈವಗಳ ವರ್ಷಾವಧಿ ನೇಮೋತ್ಸವಗಳು ಮಾ.24 ಹಾಗೂ 25ರಂದು ನಡೆಯಲಿದೆ.


ನೇಮೋತ್ಸವದ ಅಂಗವಾಗಿ ಮಾ.24ರಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ಶುದ್ಧಿ ಕಲಶ, ಸಂಜೆ ದೈವಗಳ ಭಂಡಾರ ತೆಗೆಯುವುದು, ಕ್ಷೇತ್ರದ ದೈವಗಳಾದ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ ರಾತ್ರಿ ಅನ್ನಸಂತರ್ಪಣೆ, ಮೊಗೇರ್ಕಳ ನೇಮ, ಗರಡಿ ಇಳಿಯುವುದು, ತನ್ನಿಮಾಣಿಗ ಗರಡಿ ಇಳಿಯುವುದು ನಡೆಯಲಿದೆ.


ಮಾ.25ರಂದು ಬೆಳಿಗ್ಗೆ ಕೊರಗಜ್ಜ ದೈವದ ಭಂಡಾರ ತೆಗೆದು ನಂತರ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here