ಪುತ್ತೂರು: ಸಂಟ್ಯಾರ್ ಸರಸ್ವತಿ ಪುರಂನಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿರುವ ಸರಸ್ವತಿ ಎಜುಕೇಷನ್ ಸೊಸೈಟಿಯ ಕಟ್ಟಡ ಸರಸ್ವತಿ ಸಧನದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವಂತ 5 ದಿನಗಳ ಕಾಲ ಉಚಿತ ಬೇಸಿಗೆ ಶಿಬಿರ ‘ಅಭಿವ್ಯಕ್ತ-2025’ ನಡೆಯಲಿದೆ. ಸರಸ್ವತಿ ಎಜ್ಯುಕೇಶನ್ ಸೊಸೈಟಿ ಹಾಗೂ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ ಶಿಬಿರವು ಎ.10ರಿಂದ ಪ್ರಾರಂಭಗೊಂಡು ಎ.15ರ ತನಕ ನಡೆಯಲಿದೆ.
ಶಿಬಿರದಲ್ಲಿ ಆಶಯ ಗೀತೆಗಳು, ವಿಜ್ಞಾನದೊಂದಿಗೆ ನಾವು-ನೀವು, ಮೋಜಿನ ಗಣಿತ, ನವರಸದೊಂದಿಗೆ ಅಭಿನಯ -ನಾಟ್ಯ, ನಾಟಕ -ಅಭಿನಯ, ಯೋಗಾಸನ, ಪ್ರಾಣಾಯಾಮ, ಆಟ-ರಂಗಾಟ, ಕತೆ ಕಟ್ಟಿ ನೋಡು, ಸ್ಪೋಕನ್ ಇಂಗ್ಲೀಷ್, ಪೇಪರ್ ಕ್ರಾಪ್ಟ್, ತೆಂಗಿನ ಗರಿಯಲ್ಲಿ ಕ್ರಾಪ್ಟ್, ಕಸದಿಂದ ರಸ, ಔಷದೀಯ ಎಲೆಗಳ ಪರಿಚಯ-ಮಾತುಕತೆ, ನಾಯಕತ್ವ ತರಬೇತಿ, ಶ್ಲೋಕ, ರಾಮಾಯಣ -ಮಹಾಭಾರತದತ್ತ ಒಂದು ನೋಟ, ಮಾತು-ಕತೆ, ಮುಖವಾಡ ತಯಾರಿ ಮೊದಲಾದ ತರಬೇತಿಗಳು ಶಿಬಿರದಲ್ಲಿ ನಡೆಯಲಿದೆ. ಉತ್ತಮ, ಅನುಭವೀ ಶಿಕ್ಷರನ್ನು ಒಳಗೊಂಡಿರುವ ಸಂಪನ್ಮೂಲ ವ್ಯಕ್ತಿಗಳು ಗುಣಮಟ್ಟದಲ್ಲಿ ಎಲ್ಲಾ ರೀತಿಯ ತರಬೇತಿ ನೀಡುವ ಮೂಲಕ ಶಿಬಿರವನ್ನು ನಡೆಸಿಕೊಡಲಿದ್ದಾರೆ.
102 ವರ್ಷಗಳ ಇತಿಹಾಸವಿರುವ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವದ ಸವಿನೆನಪಿಗಾಗಿ ಮಾಣಿ-ಮೈಸೂರು ಹೆದ್ದಾರಿ ಸಂಟ್ಯಾರ್‌ನ ಸರಸ್ವತಿ ಪುರಂನಲ್ಲಿ ಸರಸ್ವತಿ ಎಜ್ಯುಕೇಶನ್ ಸೊಸೈಟಿಯನ್ನು ಸ್ಥಾಪಿಸಿದ್ದು ಇತ್ತಿಚೆಗೆ ಲೋಕಾರ್ಪಣೆಗೊಂಡಿತ್ತು. ಇದರಲ್ಲಿ ಪ್ರಥಮವಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುವಂತೆ ಕಲೆ, ಕರಕುಶಲತೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಸರ್ವತೋಮುಖ ಬೆಳವಣೆಗೆಗೆ ಸಹಕಾರಿಯಾಗುವಂತೆ ಹಲವು ರೀತಿಯಲ್ಲಿ ತರಬೇತಿ ನೀಡಿ ಬೆಳೆಸಲು ಸಹಕಾರಿಯಾಗುವಂತೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಸರಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸಿರುವ ಈ ಶಿಬಿರವು ಉಚಿತವಾಗಗಿರುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದಾರ್ಥಿಗಳಿಗೆ ಅನುಕೂಲವಾಗುವಂತ ವಿವಿಧ ತರಬೇತಿಗಳನ್ನು ನಡೆಸಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ನೋಂದಾವಣೆಗಾಗಿ 8197807972 ಅಥವಾ 8197493188 ನಂಬರನ್ನು ಸಂಪರ್ಕಿಸುವಂತೆ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಪ್ರಕಟಣೆ ತಿಳಿಸಿದೆ.