ಸಂತೂರ್ ಮಾತಾ ಸ್ಪರ್ಧೆಯಲ್ಲಿ ಹೇಮಾ ಜಯರಾಮ್-ಜ್ಞಾನ ರೈ ಪ್ರಥಮ

0

ಪುತ್ತೂರು: ನೆಹರೂನಗರದ ಸಿಟಿಗುಡ್ಡೆಯ ಶ್ರೀ ಕೃಷ್ಣ ಯುವಕ ಮಂಡಲದ ನೇತೃತ್ವದಲ್ಲಿ ನಡೆದ ಸಂತೂರ್ ಮಾತಾ ಸ್ಪರ್ಧೆಯಲ್ಲಿ ಹೇಮಾ ಜಯರಾಮ್ ರೈ ಮತ್ತು ಅವರ ಪುತ್ರಿ ಜ್ಞಾನ ರೈ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂತೂರ್ ಮಾತಾ ಸ್ಪರ್ಧೆಗೆ ನೂರಕ್ಕೂ ಅಧಿಕ ಭಾವಚಿತ್ರಗಳು ಆಯ್ಕೆಯಾಗಿತ್ತು.

ಇದರಲ್ಲಿಕುರಿಯ ನಿವಾಸಿಯಾಗಿರುವ ಉದ್ಯಮಿ ಜಯರಾಮ ರೈ ಅವರ ಪತ್ನಿ, ಸುದ್ದಿ ನ್ಯೂಸ್ ಚಾನೆಲ್ ಪ್ರಧಾನ ನಿರೂಪಕಿಯೂ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಉಪಾಧ್ಯಕ್ಷರೂ ಆಗಿರುವ ಹೇಮಾ ಜಯರಾಮ ರೈ ಮತ್ತು ಅವರ ಪುತ್ರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಬಹುಮುಖ ಪ್ರತಿಭೆ ಜ್ಞಾನ ರೈ ಪ್ರಥಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here