ಪುತ್ತೂರು: ಬೇಸಿಗೆ ಬಂತೆಂದರೆ ಸಾಕು, ಕರಾವಳಿ ಭಾಗದಲ್ಲಿ ಬಿಸಿಲು ನೆತ್ತಿ ಸುಡುವ ಭಾಸವಾಗುತ್ತದೆ. ಮಣ್ಣಿನ ಒಸರಿನಲ್ಲಿ ನೀರು ಹರಿಯುವಂತೆ ಮನುಷ್ಯನ ದೇಹದಿಂದ ಬೆವರು ಹರಿಯುತ್ತದೆ. ಹೀಗಾಗಿ ಜನರು ಪದೇ ಪದೇ ತಂಪು ಪಾನೀಯ ಸೇವಿಸುವುದಲ್ಲದೆ, ತಣ್ಣೀರಿನಲ್ಲೇ ಸ್ನಾನ ಮಾಡುತ್ತಾರೆ, ಇನ್ನೂ ಕೆಲವರಿಗೆ ನೀರಿನಲ್ಲೇ ಕುಳಿತುಕೊಳ್ಳೋಣ ಎಂಬ ಯೋಚನೆ ಬರುವಷ್ಟರ ಮಟ್ಟಿಗೆ ಸೆಕೆಯಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳವು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.
ಮೊದಲ ಶಿಬಿರವು ಮಾ.13ರಂದು ಪ್ರಾರಂಭವಾಗಿದ್ದು, ಮಾ.30ರಂದು ಕೊನೆಗೊಳ್ಳಲಿದೆ. 2ನೇ ಶಿಬಿರವು ಏಪ್ರಿಲ್ 1ರಿಂದ 19ರ ವರೆಗೆ ನಡೆಯಲಿದ್ದು, ಏ.22 ರಿಂದ ಮೇ 9ರ ವರೆಗೆ 3ನೇ ಶಿಬಿರ, ಮೇ.11ರಿಂದ 29ರ ವರೆಗೆ 4ನೇ ಶಿಬಿರ ನಡೆಯಲಿದೆ. ಫ್ಯಾಮಿಲಿ ಬ್ಯಾಚ್ ಮತ್ತು ಗ್ರೂಪ್ ಡಿಸ್ಕೌಂಟ್ ಆಫರ್ ಇದ್ದು, ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಬಾಲವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಲ್ಕು ವರ್ಷಗಳ ಮೇಲ್ಪಟ್ಟು ಬ್ಯಾಚ್ ವೈಸ್ ಈಜು ತರಬೇತಿ ನೀಡಲಾಗುತ್ತದೆ. ಬೆಳಗ್ಗೆ 5.30 ರಿಂದ 6.15ರ ವರೆಗೆ, 6.30 ರಿಂದ 7.15ರ ವರೆಗೆ, 7.30 ರಿಂದ 8.15ರ ವರೆಗೆ, 8.30 ರಿಂದ 9.15ರ ವರೆಗೆ, 9.30 ರಿಂದ 10.15ರ ವರೆಗೆ ನಡೆಯಲಿದೆ.
ಸಂಜೆ 3.30 ರಿಂದ 4.15ರ ವರೆಗೆ, 4.30 ರಿಂದ 5.15ರ ವರೆಗೆ, 5.30 ರಿಂದ 6.15ರ ವರೆಗೆ ಈಜು ತರಬೇತಿ ನಡೆಯಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ 6.30 ರಿಂದ 7.15ರ ವರೆಗೆ, 7.30 ರಿಂದ 8.15ರ ವರೆಗೆ, 8.30 ರಿಂದ 9.15ರ ವರೆಗೆ ತರಬೇತಿ ನೀಡಲಾಗುತ್ತದೆ.
ಈಜು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಶಿಬಿರದಲ್ಲಿ ಪಾಲ್ಗೊಂಡು ಈಜು ಕಲಿಯುವ ಆಸಕ್ತರಿಗೆ ಇದು ಸುವರ್ಣಾವಕಾಶವಾಗಿದ್ದು, ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಿ.
ಮಾಹಿತಿಗಾಗಿ ಪ್ರಫುಲ್ಲ 9449143263, ಸೀತಾರಾಮ 9743702470, ದೀಕ್ಷಿತ್ 8904997518, ತ್ರಿಶೂಲ್ 9591313357ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಾಲವನದ ಈಜುಕೊಳದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತೀಯ ನೌಕಾಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.