ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನಿಂದ ಪುತ್ತೂರಿನಲ್ಲಿ ಭರತಮುನಿ ಜಯಂತಿ

0

ಪುತ್ತೂರು: ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಮಾ.16ರಂದು ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾ ಸಮಾಜ ಇಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮ ಜರಗಿತು.

ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್‌ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್‌ರವರು ನೃತ್ಯ ಕಾರ್ಯಕ್ರಮ ನೀಡುವಲ್ಲಿ ದೇವಸ್ಥಾನದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. 

ಭರತಮುನಿ ಜಯಂತಿ ಪ್ರಯುಕ್ತ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮಾಧವ ಭಟ್‌ರವರು ಭರತಮುನಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ಭರತ ನೃತ್ಯ ಮಾಡಿ ಮುನಿಯಾದನೋ ಅಥವಾ ಮುನಿಯಾಗಿ ನೃತ್ಯ ಮಾಡಿದನೋ. ಅವನು ಒಂದು ಶಕ್ತಿ. ಪ್ರತಿಯೊಂದು ಕ್ಷೇತ್ರದಲ್ಲಿ ಭರತಮುನಿಗೆ ಕಲಾತೀತವಾದ ಶಾಸ್ತ್ರವನ್ನು, ಕೃತಿಯನ್ನು ದೇಶಾತೀತವಾದ ಓಳನೋಟವನ್ನು ಕೊಟ್ಟ ಆ ಮಹಾಮುನಿಗೆ ಮೊದಲ ನಮನಗಳು. ಭರತನೊಬ್ಬ ಪೂಜನೀಯ ಸಂಕೇತ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಿಳಾ ಯಕ್ಷಗಾನದ ಕಲಾವಿದೆ ಶ್ರೀಮತಿ ಪದ್ಮ ಕೆ.ಆರ್ ಆಚಾರ್ಯರವರು ಮಾತನಾಡಿ, ಆ ಜಗದೀಶನನ್ನು ಕಾಣಲು ಮನದಲ್ಲಿ ಬೆಳಕನ್ನು ತುಂಬಿಕೊಂಡವರು ಮಾತ್ರ ಸಾಧ್ಯ. ಆ ಮೂಲಕ ಕಲೆಯನ್ನು ಕಂಡರವರು ವೇದಕಾಲದಿಂದಲೂ ನಾಟ್ಯವಿತ್ತು ಎಂಬುದಾಗಿ ತಿಳಿಸಿದರು. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾದ ಯು.ಕೆ ಪ್ರವೀಣ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಪ್ರೀತಿಕಲಾ ದೀಪಕ್ ಪ್ರಾರ್ಥಿಸಿದರು. ವಿದುಷಿ ನಯನಾ ವಿ.ರೈ ಸ್ವಾಗತಿಸಿ, ವಿದ್ವಾನ್ ಚಂದ್ರಶೇಖರ ನಾವಡರವರು ಅಭಿನಂದನಾ ಮಾತುಗಳನ್ನಾಡಿದರು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್‌ರವರು ಕಾರ್ಯಕ್ರಮ ನಿರೂಪಿಸಿದರು. ಯುವ ಯುಗಳ ನೃತ್ಯ ಕಾರ್ಯಕ್ರಮದಲ್ಲಿ 20 ಮಂದಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಪುತ್ತೂರಿನ ನೃತ್ಯ ಶಿಕ್ಷಕರೆಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂದಿದೆ.

ವಿದುಷಿ ನಯನಾ ವಿ.ರೈಯವರಿಗೆ ಭರತ ಪ್ರಶಸ್ತಿ..

ಪ್ರತಿ ವರ್ಷ ಪುತ್ತೂರು, ಉಡುಪಿ, ಮಂಗಳೂರು, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆಯಿಂದ ಭರತಮುನಿ ಜಯಂತಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ನೃತ್ಯಗುರು ಕರ್ನಾಟಕ ಕಲಾಶ್ರೀ, ವಿದುಷಿ ನಯನಾ ವಿ.ರೈರವರಿಗೆ ಭರತ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here