ಪುತ್ತೂರು: ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಸಾರ್ವಜನಿಕ ಬಸ್ ತಂಗುದಾಣದಲ್ಲಿ ನಿಂತಿದ್ದ ವ್ಯಕ್ತಿಯನ್ನು ರೌಂಡ್ಸ್‌ನಲ್ಲಿದ್ದ ಸಂಪ್ಯ ಪೊಲೀಸರು ತಪಾಸಣೆ ಮಾಡಿದಾಗ ಅಕ್ರಮ ಮದ್ಯದ ಸ್ಯಾಚೆಟ್‌ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ಸತೀಶ್ ರೈ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನಲ್ಲಿದ್ದ ಸುಮಾರು 2,520 ಎಮ್‌ಎಲ್‌ನ ರೂ.1,120 ಮೌಲ್ಯದ ಮದ್ಯದ ಸ್ಯಾಚೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿರುವಾಗ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಸಾರ್ವಜನಿಕ ತಂಗುದಾಣದ ಬಳಿ ತಲುಪಿದಾಗ ವ್ಯಕ್ತಿಯೊಬ್ಬರು ಬಸ್ ಸ್ಟಾಪ್ ಬಳಿ ನಿಂತುಕೊಂಡಿರುವುದನ್ನು ವಿಚಾರಿಸಿದಾಗ ಆತ ತಡವರಿಸುತ್ತಾ ಉತ್ತರಿಸಿದ್ದಲ್ಲದೆ,ಆತನ ಕೈಯಲ್ಲಿ ಹಿಡಿದುಕೊಂಡಿದ್ದ ಪ್ಲಾಸ್ಟಿಕ್ ಹ್ಯಾಂಡ್ ಕವರನ್ನು ಆತನ ಹಿಂದೆ ಮರೆ ಮಾಚಿಕೊಂಡಿರುವುದು ಅನುಮಾನಕ್ಕೆ ಕಾರಣವಾಯಿತು. ಪೊಲೀಸರು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಸ್ಯಾಚೆಟ್‌ಗಳು ಇರುವುದು ಕಂಡು ಬಂದಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.