ಪುತ್ತೂರು: ದ.ಕ ಗ್ಯಾರೇಜ್ ಮಾಲಕರ ಸಂಘ, ಪುತ್ತೂರು ವಲಯದ 2025-27ರ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಜೇಸಿಐ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ, ದರ್ಬೆ ಬೈಪಾಸ್ ಪ್ರಿಸಿಸನ್ ಕಾರ್ ಕೇರ್ ಹೊಂದಿರುವ ಶರತ್ ಕುಮಾರ್ ರೈ, ಕಾರ್ಯದರ್ಶಿಯಾಗಿ ಕಬಕ ವಿನಾಯಕ ಬೆಸ್ಟ್ ಗ್ಯಾರೇಜ್ ನ ದಿನೇಶ್ ಕಬಕ, ಕೋಶಾಧಿಕಾರಿಯಾಗಿ ಎಪಿಎಂಸಿ ಹಿಮ ಕಾರ್(ಎ.ಸಿ)ನ ಪ್ರಕಾಶ್ ರೈ ಮನವಳಿಕೆ, ಗೌರವಾಧ್ಯಕ್ಷರಾಗಿ ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್, ಉಪಾಧ್ಯಕ್ಷರಾಗಿ ಅಶೋಕ್ ಉರ್ಲಾಂಡಿ, ಪದ್ಮನಾಭ ಪಡೀಲು, ಮೋಹನ್ ಸಂಪ್ಯ, ದಿವಾಕರ ಕೆ.ಕೌಡಿಚ್ಚಾರ್, ಜಯಚಂದ್ರ ಸೇರಾಜೆ, ರೋಹಿತ್ ಮುಕ್ರಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಫ್ರಾನ್ಸಿಸ್ ಡಿ’ಸೋಜ, ಕ್ರೀಡಾ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೋಲ್ಫೆ, ಧಾರ್ಮಿಕ ಸಂಚಾಲಕರಾಗಿ ಗಣೇಶ್ ರೈ(ರೇಡಿಯೇಟರ್), ಸದಸ್ಯತ್ವ ಅಭಿಯಾನ ಸಂಘಟಕರಾಗಿ ಸುನಿಲ್ ಪಡೀಲ್, ಗೌರವ ಸಲಹೆಗಾರರಾಗಿ ಸುರೇಶ್ ಸಾಲಿಯಾನ್, ದಿನಕರ್ ಪಡೀಲು, ಶಂಕರ್ ಭಟ್, ಮೋನಪ್ಪರವರು ಆಯ್ಕೆಯಾಗಿದ್ದಾರೆ.