ಬೇಸಿಗೆಯ ಸುಡುಸುಡು ಬಿಸಿಲೆಂದರೆ ಉಸ್ಸಪ್ಪ ಎನ್ನುವವರೇ ಜಾಸ್ತಿ.. ಬಳಲಿ ಬೆಂಡಾಗಿಸೋ ಸೂರ್ಯಮಹಾರಾಜನ ತಾಪದಿಂದ ಮುಕ್ತಿ ಪಡೆದು ಕೂಲ್ ಕೂಲ್ ಆಗಿರೋ ಆಹಾರ ಸೇವಿಸ್ತಾ ದೇಹವನ್ನ ಅರೋಗ್ಯವಾಗಿರಿಸೋದಿಕ್ಕೆ ಇನ್ನಿಲ್ಲದ ಸರ್ಕಸ್ ಮಾಡುತ್ತೇವೆ. ಆರೋಗ್ಯದ ಕಾಳಜಿಯ ಜೊತೆಗೆ ನಮ್ಮ ತ್ವಜೆಯ ಆರೋಗ್ಯವನ್ನು ಕಾಪಾಡಿಕೊಳ್ಳೊದು ತುಂಬಾ ಮುಖ್ಯ..
ಬೇಸಿಗೆಯ ಸುಡು ಬಿಸಿಲಿನಲ್ಲಿಯೂ ನಮ್ಮ ತ್ವಚೆ ಸುಂದರವಾಗಿರಬೇಕು, ಕಾಳಜಿವಹಿಸಬೇಕು ಎನ್ನುವುದು ಮಹಿಳೆಯರು, ಮಕ್ಕಳು ಹಾಗೂ ಹಿರಿಜೀವಗಳ ಆಸೆ. ಸುಂದರವಾದ ತ್ವಚೆ ಪಡೆಯುವುದಾದರೂ ಹೇಗೆ? ಎನ್ನುವುದು ಕೆಲವರ ಟೆನ್ಷನ್ (tension) ಆದ್ರೆ.., ನಮ್ಮ ಸೌಂದರ್ಯವನ್ನು ಇನ್ನೂ ಇಮ್ಮಡಿಗೊಳಿಸಲು ಯಾವ ಬ್ಯೂಟಿ ಕೇರ್ ಗಳನ್ನು (beauty care) ಬಳಸಬೇಕು. ಸನ್ ಟ್ಯಾನ್, ಸನ್ ಬರ್ನ್ (sun tan, sun burn), ಬೆವರುಸಾಲೆ (ಸೆಕೆಬೊಕ್ಕೆ) ಸಮಸ್ಯೆಗಳಿಂದ ತ್ವಚೆಯ ರಕ್ಷಣೆಗೆ ಯಾವೆಲ್ಲಾ ಕ್ರೀಮ್, ಮೊಯಿಶ್ಚರೈಸರ್ (cream & moisturizer) ಬಳಸಬೇಕು..? ಯಾವ ವಯಸ್ಸಿನವರಿಗೆ ಯಾವ ಬ್ಯೂಟಿಕೇರ್ ಬಳಸಿದರೆ ತ್ವಚೆಗೆ ಉತ್ತಮ..? ಯಾವ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬೇಕೆನ್ನುವ ಬಗ್ಗೆ ಹಲವು ಗೊಂದಲವಿರುತ್ತದೆ.

ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಮನೆಯಲ್ಲಿರುವ ಹಿರಿಯರಿಗೆ ಬೇಸಿಗೆ ಕಾಲದಲ್ಲಿ ತ್ವಚೆಯ ರಕ್ಷಣೆ ಮಾಡುವ ಕುರಿತು ಗೊಂದಲಗಳಿದ್ದರೆ ಅದಕ್ಕೆ ಇಂದೇ ಪೂರ್ಣವಿರಾಮ (fullstop) ಇಡುವುದು ಉತ್ತಮ. ಯಾಕೆಂದರೆ ಮನೆಯಲ್ಲಿಯೇ ಕುಳಿತು ಕೈ ಬೆರಳಿನಂಚಿನಲ್ಲಿ ಮೊಬೈಲ್ ಸ್ಕ್ರೀನ್ ಅನ್ನು ಸ್ವಲ್ಪ Swipe ಮಾಡಿದರೆ ನಮಗೆ ಬೇಕಾದ ವಸ್ತುಗಳು ನಮ್ಮ ಮನೆಗೆ ಬಂದು ಬಿಡುತ್ತವೆ.
ಬೇಸಿಗೆಯಲ್ಲಿ ಚರ್ಮ ಕಪ್ಪಾಗಲು ಕಾರಣ: (Reasons for skin darkening in summer)
ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಯುವಿ ಕಿರಣಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತೆ ಹೀಗಾಗಿ ಟ್ಯಾನ್ ( sun tan) ಉಂಟಾಗುತ್ತದೆ. ಇದರಿಂದಾಗಿ ನಮ್ಮ ಚರ್ಮ ಕಪ್ಪಾಗುತ್ತದೆ. ಇದ್ರಿಂದ ತ್ವಚೆಯ ಬಣ್ಣ ಬದಲಾಗುತ್ತದೆ.
ಚರ್ಮದ ರಕ್ಷಣೆ ಮಾಡುವುದು ಹೇಗೆ?: (How to protect your skin)
- ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಮುಖ, ಶರೀರದ ಮೇಲೆಲ್ಲ ಧೂಳು ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರಬೇಕು. ಇದು ತಂಪಾದ ಆಹ್ಲಾದಕರ ಅನುಭವ ಕೊಡುವುದರ ಜೊತೆಗೆ ಚರ್ಮದ ಕಾಳಜಿವಹಿಸುತ್ತದೆ.
- ಬೇಸಿಗೆಯ ಬಿಸಿ ಗಾಳಿ ಹಾಗೂ ಧೂಳಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನ ದೂರ ಮಾಡಲು ಸ್ವಚ್ಛತೆ ಅಗತ್ಯ. ಹೀಗಾಗಿ ಹದ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿ. ಸ್ವಚ್ಚತೆಯ ಜೊತೆಗೆ ಹಿತ ಅನಿಸುತ್ತದೆ..
- ಚರ್ಮದ ಆರೈಕೆಗೆ ಸೋಪು ಬಳಸುವ ಬದಲು ಕಡಲೆ ಹಿಟ್ಟು, ಅಕ್ಕಿ ಹಿಟ್ಟಿಗೆ ಮೊಸರು ಸೇರಿಸಿ ಬಳಸಿ.. ಇದು ಮುಖದ ಸೌಂದರ್ಯವನ್ನು ವೃದ್ಧಿಸುತ್ತದೆ.
- ಅಲೋವೆರಾ ಆರೋಗ್ಯದ ಕಾಳಜಿಗೆ ಬೆಸ್ಟ್ ಆಯ್ಕೆ. ಹೀಗಾಗಿ ಮುಖಕ್ಕೆ ಅಲೋವೆರಾ ಹಚ್ಚಿ ಕೆಲ ನಿಮಿಷಗಳ ಕಾಲ ಮೆತ್ತಗೆ ಮಸಾಜ್ ಮಾಡಿ. ಬಳಿಕ ತಣ್ಣಿರಿನಿಂದ ಮುಖ ತೊಳೆದುಕೊಳ್ಳಿ. ಈ ಅಲೋವೆರಾ ನಮ್ಮ ದೇಹದಲ್ಲಿ ಮೆಲನಿನ್ ಉತ್ಪಾದನೆ ಹಾಗೂ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಅಹಾಯ ಮಾಡುತ್ತದೆ. ಇದರ ಉರಿಯೂತ ನಿವಾರಕ ಗುಣಗಳು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
- ಬೇಸಿಗೆಯಲ್ಲಿ ಚರ್ಮ ಆರೋಗ್ಯ ಕಾಪಾಡಿಕೊಳ್ಳಲು ಸನ್‌ಸ್ಕ್ರೀನ್ ಹಚ್ಚುವುದು ಅತೀ ಅಗತ್ಯ. ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಹೊರಗೆ ಹೋಗುವ 10 ನಿಮಿಷಕ್ಕೆ ಮುನ್ನ ಸನ್‌ಸ್ಕ್ರೀನ್ ಲೋಶನ್ ಚರ್ಮಕ್ಕೆ ಹಚ್ಚಿಕೊಳ್ಳಿ. ಪ್ರತಿ ಎರಡು ಗಂಟೆಗೊಮ್ಮೆ ಸನ್‍ಸ್ಕ್ರೀನ್ ಹಚ್ಚಿಕೊಳ್ಳೊದನ್ನ ಮರೆಯಬೇಡಿ.
- ಈ ಬೇಸಿಗೆಯಲ್ಲಿ ನೀವು ಧರಿಸೋ ಬಟ್ಟೆಗಳು ಕೂಡ ನಿಮ್ಮ ತ್ವಜೆಯನ್ನ ಹಾಳುಗೆಡವುತ್ತದೆ. ಹಾಗಾಗಿ ಮೈಗೆ ಅಂಟುವಂತಹ, ದಪ್ಪ ವಸ್ತ್ರಗಳನ್ನು ಹಾಕಬೇಡಿ, ಆದಷ್ಟು ಸಡಿಲ ಉಡುಪುಗಳನ್ನ ಆಯ್ಕೆ ಮಾಡಿಕೊಳ್ಳಿ, ಅದರಲ್ಲೂ ಕಾಟನ್ ಬಟ್ಟೆಗಳು ಇನ್ನೂ ಉತ್ತಮ.
- ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ತಂಪು ಪಾನೀಯಗಳನ್ನ ಸೇವಿಸುವ ಬದಲು ನೀರು ಮಜ್ಜಿಗೆ, ಪಾನಕ, ನಿಂಬೆ ಜ್ಯೂಸ್, ಕಲ್ಲಂಗಡಿ ಜ್ಯೂಸ್ ಹೀಗೆ ತಾಜಾ ಹಣ್ಣಿನ ಜ್ಯೂಸುಗಳನ್ನು ಸಾಧ್ಯವಾದಷ್ಟು ಸೇವಿಸಿ..

ನಮ್ಮ ಆರೋಗ್ಯದ ಕಾಳಜಿ ನಮ್ಮ ಕೈಯಲ್ಲೆ ಇದೆ. ಹೀಗಾಗಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಮಾನಕ್ಕೆ ಸಾಧ್ಯವಾದಷ್ಟು ಜಾಗೃತರಾಗಿರಿ, ಬಿಸಿಲಿಗೆ ಮೈಒಡ್ಡಿಕೊಳ್ಳದನ್ನ ಆದಷ್ಟು ಕಡಿಮೆ ಮಾಡಿ, ಹಿತವಾದ ಮಿತವಾದ ಆಹಾರ ಸೇವಿಸಿ. ಆರೋಗ್ಯವಂತರಾಗಿರಿ ತ್ವಜೆಯ ಆರೋಗವನ್ನು ಕಾಪಾಡಿಕೊಳ್ಳಿ..
Get More SunScreen Details Click Here..