ಪುತ್ತೂರು: ಚಿಕ್ಕಪುತ್ತೂರು ಶ್ರೀವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೊತ್ಸವ ಎ.29 ಮತ್ತು 30ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮಾ.23ರಂದು ನಡೆಯಿತು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಅಧ್ಯಕ್ಷ, ಮುಳಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ಶ್ರೀವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್,ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಇಂದುಶೇಖರ, ಪ್ರಧಾನ ಕಾರ್ಯದರ್ಶಿ ಪಿ.ಎನ್.ಸುಭಾಶ್ಚಂದ್ರ, ಕೋಶಾಧಿಕಾರಿ ಚಿಂತನ್ ಚೊಕ್ಕಾಡಿ, ಉಪಾಧ್ಯಕ್ಷ ಹೇಮಚಂದ್ರ ಬಪ್ಪಳಿಗೆ,ಮಾಜಿ ಪುರಸಭೆ ಅಧ್ಯಕ್ಷ, ಗೌರವ ಸಲಹೆಗಾರ ಲೊಕೇಶ್ ಹೆಗ್ಡೆ, ಜತೆ ಕಾರ್ಯದರ್ಶಿ ಎ.ಎಲ್.ಕಾರ್ತಿಕ್, ಕಿಶನ್ ಸಾಲ್ಮರ, ನಗರಸಭೆ ಸದಸ್ಯ ರಮೇಶ್ ರೈ, ಚಂದ್ರಶೇಖರ ಗೌಡ ಚಿಕ್ಕಪುತ್ತೂರು, ವಿಶ್ವನಾಥ ಗೌಡ ಚಿಕ್ಕಪುತ್ತೂರು, ಭಾಸ್ಕರ ಬೇಬಿ ಚಿಕ್ಕಪುತ್ತೂರು, ಜೀವನ್ ಕುಮಾರ್ ಚಿಕ್ಕಪುತ್ತೂರು, ಉಮೇಶ್ ಎಂ ಮುಲುವೇಳು, ಅನಿಲ್ ಗೌಡ ತೆಂಕಿಲ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸದಸ್ಯ ವಿನಯ್ ಸುವರ್ಣ,ತಾರಾನಾಥ ಎಚ್, ಪಿ.ಬಿ ಭಾಸ್ಕರ ಚಿಕ್ಕಪುತ್ತೂರು, ಪೂರ್ಣಿಮಾ ಇಂದುಶೇಖರ್, ವಿಠಲ್ ಗೌಡ ಚಿಕ್ಕಪುತ್ತೂರು ಹಾಗೂ ಸಮಿತಿಯ ಗೌರವ ಸಲಹೆಗಾರರು, ಸದಸ್ಯರು ಉಪಸ್ಥಿತರಿದ್ದರು.