ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ

0

ಧ್ವಜಾರೋಹಣ, ಹಸಿರುವಾಣಿ ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು

ಪುತ್ತೂರು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಾ.23 ರಿಂದ ಏಪ್ರಿಲ್ 1ರ ತನಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವ ಹಾಗೂ ನಂತರ ನನ್ಯದಲ್ಲಿ ನಡೆಯಲಿರುವ ಶ್ರೀ ದಂಡನಾಯಕ ದೈವಗಳ ನೇಮ, ರಾಜನ್ ದೈವದ ನೇಮ ಹಾಗೂ ಶ್ರೀ ದೇವಳದಲ್ಲಿ ಗುಳಿಗನ ಕೋಲ ಜರಗಲಿದ್ದು, ಇದಕ್ಕೆ ಮಾ.23 ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ದೊರೆತಿದೆ.


ಶ್ರೀ ಕ್ಷೇತ್ರದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಎ.ದಿವ್ಯನಾಥ ಶೆಟ್ಟಿ ಕಾವು, ಮಾಜಿ ಆಡಳಿತ ಮೊಕ್ತೇಸರ ಕಾವು ಹೇಮನಾಥ ಶೆಟ್ಟಿ, ಪವಿತ್ರಪಾಣಿ ನನ್ಯ ಅಚ್ಯುತ ಮೂಡೆತ್ತಾಯ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಊರ ಹತ್ತು ಸಮಸ್ತರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಉಗ್ರಾಣ ತುಂಬಿಸುವುದು, ಬಲಿ ಹೊರಡುವುದು, ಲಕ್ಷ್ಮೀಪೂಜೆ, ಕಾಣಿಕೆ ಡಬ್ಬಿ ವಿತರಣೆ, ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ(ಕೌಡಿಚ್ಚಾರು ದಿ|ಕೇಪು ಮೂಲ್ಯರ ಸ್ಮರಣಾರ್ಥ ಪತ್ನಿ ಗಿರಿಜಾ ಕೇಪು ಮೂಲ್ಯ ಮತ್ತು ಮಕ್ಕಳ ಸೇವೆ, ಶ್ರೀಮತಿ ರಾಜಲಕ್ಷ್ಮಿ ರಾಜಾರಾವ್ ನಿಧಿಮುಂಡ ಮನೆಯವರಿಂದ) ನಡೆಯಿತು. ರಾತ್ರಿ ಉತ್ಸವ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ ಚಿಣ್ಣರ ಕಲರವ, ಗೆಳೆಯರ ಬಳಗ ಕಾವು ಇವರಿಂದ ಜಿ.ಯನ್. ಬಂಗೇರ ವಿರಚಿತ ತುಳು ಸಾಮಾಜಿಕ ನಾಟಕ ‘ಬಡವನ ಉಡಲ್’ ಜರಗಲಿದೆ.


ಹಸಿರುವಾಣಿ ಮೆರವಣಿಗೆ:
ಮಾ.22 ರಂದು ಶನಿವಾರ ಸಂಜೆ ಶ್ರೀಕೃಷ್ಣ ಭಜನಾ ಮಂದಿರ, ಕೌಡಿಚ್ಚಾರು ಎಂಬ ಸ್ಥಳದಿಂದ ಹೊರಟು ಮಿನೋಜಿಕಲ್ಲು, ಮದ್ಲ, ಪಟ್ಟುಮೂಲೆ, ನನ್ಯ, ಚಾಕೋಟೆ, ಆಚಾರಿಮೂಲೆ, ಕಮಲಡ್ಕ ಎಂಬ ಸ್ಥಳಗಳಿಂದ ಶ್ರೀ ದೇವಳಕ್ಕೆ ಹಸಿರುವಾಣಿ ಮೆರವಣಿಗೆ ನಡೆಯಿತು. ಮಾ.24 ರಂದು ಸೋಮವಾರ ಸಂಜೆ ಮಾಣಿಯಡ್ಕ ಅಂಗಡಿಯ ಬಳಿಯಿಂದ(ಕೆರೆಮಾರು, ನಿಧಿಮುಂಡ, ಬಾಳೆಕೊಚ್ಚಿ, ಮುಂಡಕೊಚ್ಚಿ, ಪಿಲಿಪಂಜರ, ಬರೆಕೆರೆ, ಮಾಣಿಯಡ್ಕ ಎಂಬ ಸ್ಥಳಗಳಲ್ಲಿರುವವರಿಂದ) ಹಸಿರುವಾಣಿ ಮೆರವಣಿಗೆ ನಡೆಯಲಿದೆ.


ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಂಬೋಡಿ, ಶ್ರೀಮತಿ ಸುಮಲತ, ಶ್ರೀಮತಿ ನವೀನ ಕುಮಾರಿ, ರವಿರಾಜ್, ಅಮ್ಮು ರೈ, ರವೀಂದ್ರ ಪೂಜಾರಿ, ಚಂದ್ರಶೇಖರ್ ಬಲ್ಯಾಯರವರ ಸಹಿತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಮಾ.24ರಂದು ಶ್ರೀ ಕ್ಷೇತ್ರದಲ್ಲಿ..
ಮಾ.24 ರಂದು ಸೋಮವಾರ ಬೆಳಿಗ್ಗೆ ಉತ್ಸವ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ, ಮಧ್ಯಾಹ್ನ ಅನ್ನಸಂತರ್ಪಣೆ(ಶ್ರೀ ದೇವದಾಸ್ ಕಾಮತ್ ನಿವೃತ್ತ ಮೆನೇಜರ್, ವಿಜಯಾ ಬ್ಯಾಂಕ್ ಕಾವು ಇವರ ಸೇವೆ), ರಾತ್ರಿ ಉತ್ಸವ ಬಲಿ, ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ(ರಿ.) ನನ್ಯ-ಕಾವು ಇದರ ೧೪ನೇ ವಾರ್ಷಿಕೋತ್ಸವ ತುಡರ್ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸಂಜೆ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ಇವರ ಸಹಯೋಗದೊಂದಿಗೆ ‘ನೃತ್ಯಾರ್ಪಣಾ’, ರಾತ್ರಿ ಸಭಾ ಕಾರ್ಯಕ್ರಮ, ಸನ್ಮಾನ, ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದಲ್ಲಿ ಶರತ್ ಉಚ್ಚಿಲ ನಿರ್ದೇಶನದ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದ ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ‘ಕುಟ್ಯಣ್ಣನ ಕುಟುಂಬ’ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜ್ರಂಭಣೆಯ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಿ..
ಪ್ರತೀ ವರ್ಷ ಶ್ರೀ ಕ್ಷೇತ್ರದಲ್ಲಿನ ಜಾತ್ರೋತ್ಸವವು ಭಕ್ತರ ಸಹಕಾರದಿಂದ ವಿಜ್ರಂಭಣೆಯಿಂದ ಸಾಗುತ್ತಿದೆ ಮಾತ್ರವಲ್ಲ ಉತ್ತಮವಾಗಿ ಚಾಲನೆ ದೊರೆತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಪ್ರಸ್ತುತ ವರ್ಷದ ಜಾತ್ರೋತ್ಸವಕ್ಕೆ ಈಗಾಗಲೇ ವಿವಿಧ ಕಡೆಗಳಿಂದ ಹಸಿರುವಾಣಿ ಹರಿದುಬರುತ್ತಿದೆ. ಅದರಂತೆ ಜಾತ್ರೋತ್ಸವ ಮುಗಿಯುವವರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಸನ್ನಿಧಿಯಲ್ಲಿ ಜರಗುವ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಎ.ದಿವ್ಯನಾಥ ಶೆಟ್ಟಿ ಕಾವು, ಆಡಳಿತ ಮೊಕ್ತೇಸರರು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here