ರಾಮಕುಂಜ: ಬಿಹಾರದ ಗಯಾದ್ ರಸಲ್‌ಪುರದಲ್ಲಿ ಮಾ.27ರಿಂದ 30ರ ವರೆಗೆ ನಡೆಯುವ 34ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್‌ಗೆ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರ ಸಬ್ ಜೂನಿಯರ್ ರಾಜ್ಯ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯು ಮಾ.9ರಂದು ಬೆಂಗಳೂರಿನ ಶ್ರೀ ಕಂಠೀರವ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಿತು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಧನ್ವಿ ಕೆ.ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಬಾಲಕಿ ಆಗಿರುತ್ತಾರೆ. ಈಕೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮನೆಜಾಲು ನಿವಾಸಿ ದುಗ್ಗಣ್ಣಗೌಡ ಮತ್ತು ಅಮಿತಾ ದಂಪತಿಯ ಪುತ್ರಿ. ವಿದ್ಯಾರ್ಥಿನಿಗೆ ಶಾಲಾ ಮುಖ್ಯಗುರು ಸತೀಶ್ ಭಟ್‌ರವರ ಮಾರ್ಗದರ್ಶನದಲ್ಲಿ ಮಾಧವ ಬಿ.ಕೆ., ಜಸ್ವಂತ್, ಮಂಜುನಾಥ್ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ತರಬೇತಿ ನೀಡಿದ್ದರು.
Home ಇತ್ತೀಚಿನ ಸುದ್ದಿಗಳು ರಾಷ್ಟ್ರಮಟ್ಟದ ಬಾಲಕಿಯರ ಸಬ್‌ಜೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್‌ಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಧನ್ವಿ...