ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಮಠದಲ್ಲಿ ಮಾ.24ರಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 20ನೇ ಹಾಗೂ ಪುನಃ ಪ್ರತಿಷ್ಠೆಯಾಗಿ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ನಡೆಯಲಿದೆ.
ಶ್ರೀ ಮಠಕ್ಕೆ ಪರಮಪೂಜ್ಯ ಮಂತ್ರಾಲಯ ಮಠಾಧೀಶರಾದ ಶ್ರೀ 1008 ಶ್ರೀ ಸುಶಮೀಂದ್ರ ತೀರ್ಥ ಕರಕಮಲ ಸಂಜಾತ, ಶ್ರೀ 1008 ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀ ಪಾದಂಗಳವರ ಉಪಸ್ಥಿತಿಯಲ್ಲಿ ವೇ.ಮೂ. ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯರ ಮಾರ್ಗದರ್ಶನದಂತೆ ವೇ.ಮೂ. ಚಿತ್ರಾಪುರ ಶ್ರೀನಿವಾಸ ಆಚಾರ್ಯರ ನೇತೃತ್ವದಲ್ಲಿ ವೈದಿಕ ವಿಧಿ- ವಿಧಾನಗಳು ನಡೆಯಲಿವೆ. ಬೆಳಗ್ಗೆ 6:30ಕ್ಕೆ ಉಷಃಕಾಲ ಪೂಜೆಯಿಂದ ವೈದಿಕ ವಿಧಿ- ವಿಧಾನಗಳು ಆರಂಭಗೊಳ್ಳಲಿದ್ದು, ಬೆಳಗ್ಗೆ 10:30ರ ನಂತರ ನಡೆಯುವ ಶುಭ ಮುಹೂರ್ತದಲ್ಲಿ ಮಂತ್ರಾಲಯ ಮಠಾಧೀಶರುಗಳಿಂದ ಶ್ರೀ ಲಕ್ಷ್ಮಣ ಸಮೇತ ಸೀತಾಪತಿ ಶ್ರೀ ರಾಮಚಂದ್ರ ದೇವರು, ಶ್ರೀ ಮುಖ್ಯಪ್ರಾಣ ದೇವರು ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಮಹಾಪೂಜೆಯಾಗಿ ಶ್ರೀಗಳ ಆಶೀರ್ವಚನ ನಡೆದು, ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7:30ಕ್ಕೆ ರಂಗಪೂಜೆ, ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆದು, ಫಲಾಹಾರ ವಿತರಣೆಯಾಗಲಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.