ಪುತ್ತೂರು: ಈಗಾಗಲೇ ಬೊಳುವಾರಿನಲ್ಲಿ ವಿಶ್ವಕರ್ಮ ಸಭಾಭವನಕ್ಕೆ ತೆರಳುವ ರಸ್ತೆ ಡಾಮರೀಕರಣಗೊಂಡಿದ್ದು ರಸ್ತೆಯ ಬದಿಯ ಚರಂಡಿ ಕಾಮಗಾರಿಯನ್ನೂ ಪೂರ್ಣಗೊಳಿಸಬೇಕೆಂದು ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ರವರಿಗೆ ಪಂಚಮುಖಿ ಫ್ರೆಂಡ್ಸ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮುಖಿ ಫ್ರೆಂಡ್ಸ್ ನ ಅಧ್ಯಕ್ಷ ರವಿ ಆಚಾರ್ಯ, ಕಾರ್ಯದರ್ಶಿ ರಾಜು ಆಚಾರ್ಯ, ಗಣೇಶ್ ಆಚಾರ್ಯ, ಸುಶಾಂತ್ ಮರೀಲ್, ರೋಹಿತ್ ಆಚಾರ್ಯ ಉಪಸ್ಥಿತರಿದ್ದರು.