ಈಶ್ವರಮಂಗಲ : ಪ.ವರ್ಗ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 1 ಕೋಟಿ ಮಂಜೂರು

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಪಾಳ್ಯತ್ತಡ್ಕದಲ್ಲಿ ನೂತನ ಬಾಲಕರ‌ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ರೂ ಒಂದು ಕೋಟಿ ಅನುದಾನ‌ ಮಂಜೂರಾಗಿದೆ.

ಪಾಳ್ಯತ್ತಡ್ಕದಲ್ಲಿರುವ ಹಾಸ್ಟೆಲ್ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ,ಹೊಸ ಕಟ್ಟಡ ನಿರ್ಮಾಣ‌ಮಾಡುವಲ್ಲಿ ಪುತ್ತೂರು ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.‌ ಈ ಹಿಂದೆ ಇದೇ ಕಟ್ಟಡ ದುರಸ್ಥಿಗೆ ಅನುದಾನ ಬಿಡುಗಡೆಯಾಗಿದ್ದರೂ ಹಳೆಯ ಕಟ್ಟಡವನ್ನು ದುರಸ್ಥಿ ಮಾಡದೆ ಹೊಸ ಕಟ್ಟಡ ಮಂಜೂರು‌ ಮಾಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಇದೀಗ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣವಾಗುತ್ತಿರುವ ಹೊಸ ಹಾಸ್ಟೆಲ್ ಕಟ್ಟಡಕ್ಕೆ ಒಂದು ಕೋಟಿ ಅನುದಾನ ಮಂಜೂರಾಗಿದೆ.

ಈಶ್ವರಮಂಗಲದಲ್ಲಿರುವ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ‌ ನಿಲಯ ಕಟ್ಟಡ ಶಿಥಿಲಗೊಂಡಿದ್ದು ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಮಂಜೂರಾಗಿದೆ.‌ಮುಂದೆ ಹೊಸ ಶೈಲಿಯ ಹೊಸ ಕಟ್ಟಡ ನಿರ್ಮಾಣವಾಗಲಿದೆ.
ಅಶೋಕ್ ರೈ ಶಾಸಕರು ,ಪುತ್ತೂರು

LEAVE A REPLY

Please enter your comment!
Please enter your name here