ಅಂಬೇಡ್ಕರನ್ನು ಹೊಗಳಿ ಅವರು ಬರೆದ ಪುಸ್ತಕಕ್ಕೆ ಅನ್ಯಾಯ ಮಾಡುವ ಷಡ್ಯಂತ್ರ – ಭಾರತೀ ಶೆಟ್ಟಿ
ಪುತ್ತೂರು: ಅಖಂಡ ಭಾರತವನ್ನು ಒಡೆದ ಕಾಂಗ್ರೆಸ್ ಇವತ್ತು ಧರ್ಮ ಮಾತ್ರವಲ್ಲ ಜಾತಿ ಜಾತಿಯನ್ನು ಒಡೆಯುತ್ತಿದೆ. ಒಂದು ಕಡೆ ಅಂಬೇಡ್ಕರ್ ಅವರನ್ನು ಹೊಗಳಿ ಅವರು ಬರೆದ ಪುಸ್ತಕಕ್ಕೆ ಅನ್ಯಾಯ ಮಾಡುವ ಷಡ್ಯಂತ್ರ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಹೇಳಿದರು. ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಸಲ್ಮಾನರಿಗಾಗಿ ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮಾ.೨೫ ರಂದು ಬಿಜೆಪಿಯಿಂದ ದರ್ಬೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹೇಳಿದರು.

ಸ್ವತಂತ್ರ ಭಾರತದ ಭೂಪಟವನ್ನು ಛಿದ್ರ ಮಾಡಿದ, ಧರ್ಮ, ಜಾತಿ,ಮತಮತಗಳಲ್ಲಿ ವೈಮನಸ್ಸು ಮೂಡಿಸಿದ ಕೀರ್ತಿ ಕಾಂಗ್ರೆಸ್ ನದ್ದು. ಸಾಮಾಜಿಕ ನ್ಯಾಯಕ್ಕಾಗಿ ಕೊಟ್ಟ ಈ ಮೀಸಲಾತಿಯನ್ನು ಇವತ್ತು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಒಂದು ಧರ್ಮಕ್ಕೆ ಸೀಮಿತ ಮಾಡಲು ಡಿ ಕೆ ಶಿವಕುಮಾರ್ ಅವರು ಹೊರಟಿದ್ದಾರೆ. ಬಿಜೆಪಿ ಇದರ ವಿರುದ್ಧ ನಿರಂತರ ಹೋರಾಟ ಮಾಡಲಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಮುಸಲ್ಮಾನರನ್ನು ಒಲೈಸುವ ಕೆಲಸ ಕಾಂಗ್ರೆಸ್ ಒಂದು ಕಡೆ ಭ್ರಷ್ಟಾಚಾರ, ತುಷ್ಡಿಕಾರಣ ಮಾಡಿ ಮತ್ತೊಮ್ಮೆ ಸಂವಿಧಾನವನ್ನೆ ಬದಲಾವಣೆ ಮಾಡುವ ಹೇಳಿಕೆ ಮುಂದೆ ಕಾಂಗ್ರೆಸ್ ದೇಶವನ್ನೆ ಛಿದ್ರ ಮಾಡಲಿದೆ. ವಿಧಾನ ಸಭಾಪತಿ ಜಿಲ್ಲೆಯನ್ನು ಮುಸ್ಲೀಂಕರಣ ಮಾಡುತ್ತಿದ್ದಾರೆ. ಅವರು ನೂರಕ್ಕೆ ನೂರು ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನಾವು ಎಚ್ಚೆತ್ತು ಕೊಳ್ಳದ ಕಾರಣ ಇವತ್ತು ನಾವು ಅನುಭವಿಸುತ್ತಿದ್ದೇವೆ. ಮುಸ್ಲಿಂ ತುಷ್ಟೀಕರಣಕ್ಕೆ ಮಿತಿ ಬೇಕು. ಅತಿ ಹೆಚ್ಚು ಭಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಹಾಗಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿರುದ್ದ ಕಾಂಗ್ರೆಸ್ ಇದೆ ಎಂದು ಹೇಳಿದ ಅವರು ಈ ಪ್ರತಿಭಟನೆ ನಿತ್ಯ ನಡೆಯುತ್ತದೆ. ನಾವು ಕೋರ್ಟ್ ಮೆಟ್ಟಲೇರುತ್ತೇವೆ. ಸಂವಿಧಾನ ತಿದ್ದುಪಡಿ ಮಾಡಲು ಬಿರುವುದಿಲ್ಲ ಎಂದು ಹೇಳಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು ಸಹಿತ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಡಿ ಕೆ ಶಿವಕುಮಾರ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.