ತ್ರೋಬಾಲ್‌ನಲ್ಲಿ ಆದರ್ಶ ಆಸ್ಪತ್ರೆ ಪ್ರಥಮ, ಕ್ರಿಕೆಟ್‌ನಲ್ಲಿ ವೈದ್ಯರ‍್ಸ್ ಆಸ್ಪತ್ರೆ ಪ್ರಥಮ
ಪುತ್ತೂರು: ಪುತ್ತೂರು ಆಸ್ಪತ್ರೆಗಳ ಒಕ್ಕೂಟದ ವಾರ್ಷಿಕ ಕ್ರೀಡಾಕೂಟವು ಮಾ.23ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.
ಮಹಿಳೆಯರಿಗಾಗಿ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಆದರ್ಶ ಅಸ್ಪತ್ರೆ ಪ್ರಥಮ, ಪುತ್ತೂರು ಸಿಟಿ ಆಸ್ಪತ್ರೆ ದ್ವಿತೀಯ, ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ವೈದ್ಯರ‍್ಸ್ ಆಸ್ಪತ್ರೆ ಪ್ರಥಮ, ಸರಕಾರಿ ಆಸ್ಪತ್ರೆ ದ್ವಿತೀಯ ಬಹುಮಾನ ಪಡೆದಿದೆ. ತ್ರೋಬಾಲ್ ನಲ್ಲಿ ಏಳು ಆಸ್ಪತ್ರೆಗಳ ಮಹಿಳಾ ತಂಡಗಳು ಮತ್ತು ಕ್ರಿಕೆಟ್ ನಲ್ಲಿ ಏಳು ಆಸ್ಪತ್ರೆಗಳ ಪುರುಷರ ತಂಡಗಳು ಭಾಗವಹಿಸಿದ್ದವು.

ಪುತ್ತೂರು ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಜನರಿಗೆ ತಮ್ಮ ಉದ್ಯೋಗದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗಳು ಅತಿ ಮುಖ್ಯ ಎಂದು ಹೇಳಿ ಶುಭಹಾರೈಸಿದರು. ವೇದಿಕೆಯಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎಸ್ ಎಂ ಪ್ರಸಾದ್, ಡಾ. ಎಂ ಎಸ್ ಶೆಣೈ, ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಆದರ್ಶ ಆಸ್ಪತ್ರೆಯ ಡಾ. ಎಸ್.ಎಸ್.ಜೋಶಿ, ಸುಶ್ರುತ ಆಸ್ಪತ್ರೆಯ ಡಾ. ಜಯಶ್ರೀ ಪೆರುವಾಜೆ ಮತ್ತು ಡಾಕ್ಟರ್ಸ್ ಫೋರಂ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು.

ತ್ರೋಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಎಸೆತಗಾರ್ತಿಯಾಗಿ ಸಿಟಿ ಆಸ್ಪತ್ರೆಯ ನವ್ಯ, ಉತ್ತಮ ಹಿಡಿತಗಾರ್ತಿಯಾಗಿ ಆದರ್ಶ ಆಸ್ಪತ್ರೆಯ ದೀಪಿಕಾ, ಸರ್ವಾಂಗೀಣ ಆಟಗಾರ್ತಿಯಾಗಿ ಆದರ್ಶ ಆಸ್ಪತ್ರೆಯ ಭವ್ಯ ಇವರುಗಳು ಪ್ರಶಸ್ತಿಗಳನ್ನು ಪಡೆದರು. ಪ್ರತಿ ಪಂದ್ಯಾಟದಲ್ಲಿ ಉತ್ತಮ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ಕೊಡಲಾಯಿತು. ಕ್ರಿಕೆಟ್ ಪಂದ್ಯಾವಳಿಯ ಉತ್ತಮ ದಾಂಡಿಗನಾಗಿ ಸರಕಾರಿ ಆಸ್ಪತ್ರೆಯ ಪುರಂದರ, ಉತ್ತಮ ಎಸೆತಗಾರನಾಗಿ ವೈದ್ಯರ್ಸ್ ಆಸ್ಪತ್ರೆಯ ಭುವನ್, ಹಾಗೂ ಸರ್ವಾಂಗೀಣ ಆಟಗಾರನಾಗಿ ವೈದ್ಯರ್ಸ್ ಆಸ್ಪತ್ರೆಯ ಪುಷ್ಪರಾಜ್ ಇವರುಗಳು ಬಹುಮಾನಗಳನ್ನು ಪಡೆದುಕೊಂಡರು. ಪ್ರತಿ ಆಟಕ್ಕೂ “ಸರ್ವಾಂಗೀಣ ಆಟಗಾರ” ಪ್ರಶಸ್ತಿಯನ್ನು ಕೊಡಲಾಯಿತು.

ಡಾ. ಅಭೀಶ್, ಡಾ. ಎಸ್ ಎಂ ಪ್ರಸಾದ್, ಡಾ. ಆದರ್ಶ, ಡಾ. ಸುರೇಶ್ ಪುತ್ತೂರಾಯ, ಡಾ. ವಿವೇಕ್ ಕಜೆ, ಡಾ. ಕೀರ್ತನ್ ಕಜೆ, ಡಾ. ಪ್ರೀತಿ ರಾಜ್ ಬಲ್ಲಾಳ್, ಡಾ. ಸಾಯಿಪ್ರಕಾಶ್, ಡಾ. ಹರೀಶ್ ಮಡಿವಾಳ್, ಡಾ. ಪ್ರದೀಪ್ ಕುಮಾರ್ ಬೋರ್ಕರ್, ಚೇತನ್ ಪ್ರಕಾಶ್, ಡಾ. ಸೃಜನ್, ಡಾ. ಶ್ರವಣ್, ಡಾ. ಕೀರ್ತನ್, ಡಾ. ಹರ್ಷಿತ, ಡಾ. ಸಿಂಧೂರ, ಡಾ. ನಯನ, ಡಾ. ಗ್ರೀಷ್ಮ ಇವರೆಲ್ಲ ಆಟಗಾರರಾಗಿ ಭಾಗವಹಿಸಿದರೆ ಡಾ. ಅನಿಲ್, ಡಾ. ವರುಣ್ ಭಾಸ್ಕರ್, ಡಾ. ಗಣೇಶ್ ಪ್ರಸಾದ್ ಮುದ್ರಜೆ, ಡಾ.ಚೇತನ ಸುಬ್ರಹ್ಮಣ್ಯ, ಡಾ. ಚಂದ್ರಶೇಖರ್ ಕಜೆ, ಡಾ. ರವಿಪ್ರಕಾಶ್ ಕಜೆ, ಡಾ. ಪ್ರಶಾಂತ್ ಜಾನಾ, ಡಾ. ಸುಲೇಖ ವರದರಾಜ್, ಡಾ. ಮಧುರಾ ಭಟ್, ಡಾ. ಸ್ಮಿತಾ ಕಜೆ, ಡಾ. ಆಶಾ ಜ್ಯೋತಿ, ಡಾ. ಅಜಯ್, ಡಾ. ಪ್ರಶಾಂತ್ ಇವರು ವೀಕ್ಷಕರಾಗಿ ಭಾಗವಹಿಸಿದರು. ಕ್ರಿಕೆಟ್ ನಲ್ಲಿ ತೀರ್ಪುಗಾರರಾಗಿ ಸುಧೀರ್, ವಿಜಿತ್, ವಿನೋದ್ ಮತ್ತು ಪುರಂದರ ರೈ ಅವರುಗಳು ಹಾಗೂ ತ್ರೋಬಾಲ್ ನಲ್ಲಿ ತೀರ್ಪುಗಾರರಾಗಿ ಶ್ರೀಮತಿ ಜ್ಯೋತಿ, ಯತೀಶ್, ಅಜಿತ್ ಮತ್ತು ಗೋಪಿನಾಥ್ ಇವರುಗಳು ಸಹಕರಿಸಿದರು. ಧನುಷ್ ವೀಕ್ಷಕ ವಿವರಣೆಯನ್ನು ನೀಡಿದರು. ಪುತ್ತೂರು ಸಿಟಿ ಆಸ್ಪತ್ರೆಯ ಸ್ವಾತಿ ಮತ್ತು ಶ್ವೇತ ಪ್ರಾರ್ಥಿಸಿದರು. ನಳಿನಾಕ್ಷಿ ಮತ್ತು ಡಾ.ನಿರೂಪಮಾ ಕಾರ್ಯಕ್ರಮ ನಿರೂಪಿಸಿದರು.

