ಪುತ್ತೂರು: ಹಿರೇಬಂಡಾಡಿ ಗ್ರಾಮದ ನೆಕ್ಕಿಲ ಎಂಬಲ್ಲಿ ಗೇರುತೋಪಿಗೆ ಬೆಂಕಿ ಬಿದ್ದ ಘಟನೆ ಮಾ.25ರಂದು ನಸುಕಿನ ವೇಳೆ ನಡೆದಿದೆ. ಗೇರುತೋಟವೊಂದಕ್ಕೆ ನಸುಕಿನ ವೇಳೆಯಲ್ಲಿ ಬೆಂಕಿ ಬಿದ್ದು ಸುಮಾರು 3 ಎಕರೆಯಷ್ಟು ಜಾಗ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೆಂಕಿ ಬೀಳಲು ಕಾರಣ ತಿಳಿದು ಬಂದಿಲ್ಲ.