ರಾಮಕುಂಜ: ಮಾ.29ರಿಂದ ಎ.2ರ ತನಕ ನಡೆಯುವ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಅಂಬಾಬೀಡು ಕುಟುಂಬಸ್ಥರ ತೋಟದಲ್ಲಿ ಗೊನೆ ಮುಹೂರ್ತ ಮಾ.24ರಂದು ನಡೆಯಿತು.
ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಮತ್ತು ಲಕ್ಷ್ಮೀನಾರಾಯಣ ರಾವ್ ಆತೂರು ಗೊನೆ ಮುಹೂರ್ತ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೀರಜ್‌ಕುಮಾರ್ ರೈ ಅರುವಾರ ಬಾಳಿಕೆ, ಸದಸ್ಯರಾದ ಯತೀಶ ಗುಂಡಿಜೆ, ಸಂಜೀವ ಸುದೆಂಗಳ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಉತ್ಸವ ಸಮಿತಿ ಅಧ್ಯಕ್ಷರಾದ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಮೋಹನದಾಸ ರೈ ಬಡಿಲ, ರಾಜೀವ ಪೊಸಲಕ್ಕೆ, ಶೀನಪ್ಪ ಗೌಡ ಪಲ್ಲಡ್ಕ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಪಲ್ಲಡ್ಕ, ಅಂಬಾಬೀಡು ಕುಟುಂಬಸ್ಥರಾದ ಸುಂದರ ಶೆಟ್ಟಿ, ಜಗನ್ನಾಥ ರೈ, ಗಂಗಾಧರ ರೈ, ರಾಮಣ್ಣ ರೈ, ಪ್ರಕಾಶ್ ಶೆಟ್ಟಿ ಅಂಬಾ, ಪ್ರದೀಪ್ ಶೆಟ್ಟಿ ಅಂಬಾ, ಜಯಕರ ರೈ, ಜಗದೀಶ್ ಶೆಟ್ಟಿ, ಆನಂದ ಆಳ್ವ, ಶಶಿಕುಮಾರ್ ಮತ್ತು ಅಂಬಾಬೀಡು ಕುಟುಂಬಸ್ಥರು, ಗ್ರಾಮಸ್ಥರಾದ ಶ್ರೀನಿವಾಸ ಪಲ್ಲಡ್ಕ ಪಟ್ಟೆ, ರಘುನಾಥ ಶೆಟ್ಟಿ ಕಲ್ಕಾಡಿ, ಮೋಹನ ಪಲ್ಲಡ್ಕ, ಸೋಮನಾಥ ಪಲ್ಲಡ್ಕ, ಡಿ.ಟಿ.ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

