ಪುತ್ತೂರು: ಕೆರೆಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ನರಿಮೊಗರಿನ ಶಾಂತಿಗೋಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮರಕ್ಕೂರು ನಿವಾಸಿ ಕಿರಣ್ ನಾಯ್ಕ್ (30ವ) ಎಂದು ಗುರುತಿಸಲಾಗಿದೆ.
ವೈದ್ಯರೊಬ್ಬರಿಗೆ ಸೇರಿದ ಮರಕ್ಕೂರುನಲ್ಲಿರುವ ತೋಟದಲ್ಲಿ ಟಾರ್ಪಲಿನಿಂದ ನಿರ್ಮಿಸಿದ ತಾತ್ಕಾಲಿಕ ಕೆರೆಗೆ ಯುವಕ ಬಿದ್ದು ಮೃತಪಟ್ಟಿದ್ದಾನೆನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.