ಪುತ್ತೂರು: ದಕ್ಷಿಣ ಕನ್ನಡದ ಹೆಸರಾಂತ martial Arts ಸಂಸ್ಥೆಯಾಗಿರುವ IKMA (Institute of Karate and Martial Arts) ಇದರ ಪುತ್ತೂರಿನ ಶಾಖೆಯಿಂದ IKMA Summer camp Season-3 2025 ಎ.01 ರಿಂದ 10 ರವರೆಗೆ ತೆಂಕಿಲ ನರೇಂದ್ರ ಪಿಯು ಕಾಲೇಜಿನಲ್ಲಿ ನಡೆಯಲಿದೆ.
ಇದರಲ್ಲಿ ಆತ್ಮರಕ್ಷಣೆ, ದೈಹಿಕ ಕೌಶಲ್ಯಗಳು, ಯೋಗ, ದೈಹಿಕ ಚಟುವಟಿಕೆಗಳು ಮತ್ತು ಭಾರತ ಸರಕಾರದ ಮಾನ್ಯತೆ ಪಡೆದ Martial Arts ಕ್ರೀಡೆಗಳಾದ Karate, Boxing, Kick Boxing ಕ್ರೀಡೆಯ ಬಗ್ಗೆ Basic ತರಬೇತಿ ನೀಡಲಾಗುವುದು. ಅತಿ ಮುಖ್ಯವಾಗಿ ಆತ್ಮರಕ್ಷಣೆ ಕಲೆಯ ಬಗ್ಗೆ ಉತ್ತಮವಾಗಿ ತರಬೇತಿ ನೀಡಲಾಗುವುದು. ಈಗಿನ ವಿಧ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆ, ರಾಸಾಯನಿಕ ಭರಿತ ಆಹಾರ ಸೇವನೆ, ಒತ್ತಡಗಳಿಂದ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ, ಅದರ ಜೊತೆ ದೈಹಿಕ ಆರೋಗ್ಯ, ತೂಕ ಕಡಿಮೆ, ಮಾನಸಿಕವಾಗಿ ಬಲಾಢ್ಯವಾಗಿರಲು ಬೇಕಾದಂತಹ ತರಬೇತಿ ನೀಡಲಾಗುವುದು. IKMA ಪುತ್ತೂರು ಶಾಖೆಯ ವಿಧ್ಯಾರ್ಥಿಗಳು ಈಗಾಗಲೇ ಸತತ 2 ವರ್ಷದಿಂದ ದಕ್ಷಿಣ ಕನ್ನಡದಿಂದ ಅತೀ ಹೆಚ್ಚು ಸ್ಕೂಲ್ ಗೇಮ್ ಫೆಡರೇಶನ್ಗೆ ಆಯ್ಕೆ ಆಗಿದ್ದು ಉತ್ತಮ ಪ್ರದರ್ಶನ ನೀಡಿರುತ್ತಾರೆ. ಈ ಕ್ಯಾಂಪ್ನಲ್ಲಿ ನುರಿತ ಶಿಕ್ಷಕರಿಂದ ಅತ್ಯುತ್ತಮ ರೀತಿಯಲ್ಲಿ ಮೇಲಿನ ವಿಭಾಗದಲ್ಲಿ ಉತ್ತಮ ತರಬೇತಿ ನೀಡಲಾಗುವುದು. ಪ್ರತಿ ಸೋಮವಾರ ಮತ್ತು ಮಂಗಳವಾರ ದರ್ಬೆ ಕೈಗಾರಿಕಾ ಭವನದಲ್ಲಿ (ಸಿಡ್ಕೋ) 5.30 ರಿಂದ 7.30 ರವರೆಗೆ ತರಗತಿಗಳು ನಡೆಯುತ್ತದೆ.
ಆಸಕ್ತರು ದೂರವಾಣಿ ಸಂಖ್ಯೆ 9620986251, 7349485412 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.