ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದ ಆಶ್ರಯದಲ್ಲಿ ಯಕ್ಷಾಭಿಮಾನಿ ಬಳಗ ಸರ್ವೆ, ಪುತ್ತೂರು, ಕೆದಂಬಾಡಿ ಇದರ ಸಹಕಾರದೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಮಾ.24ರಂದು ಸಂಜೆ ಶ್ರೀರಾಮ ಮಂದಿರ ಸನ್ಯಾಸಿಗುಡ್ಡೆಯಲ್ಲಿ ‘ ಶ್ರೀ ಹರಿದರ್ಶನ’ ಹಿರಣಾಕ್ಷ ವಧೆ, ಭಕ್ತಪ್ರಹ್ಲಾದ, ಸುಧನ್ವಾರ್ಜುನ ಎಂಬ ಕಥಾಭಾಗವನ್ನು ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ಚೌಕಿ ಪೂಜೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರ ಪರವೂರ ನೂರಾರು ಯಕ್ಷಗಾನಾಭಿಮಾನಿಗಳು ಆಗಮಿಸಿ ಯಕ್ಷಗಾನ ನೋಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಕೆದಂಬಾಡಿ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು, ಭಜನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

