ಪುತ್ತೂರು: ಚಲಿಸುತ್ತಿರುವಾಗಲೇ ಖಾಸಗಿ ಬಸ್‌ನ ಟಯರ್ ಸ್ಪೋಟಗೊಂಡ ಘಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ನೆಲ್ಲಿಕಟ್ಟೆ ಹಳೆ ಬಜಾರ್ ಪೋಸ್ಟ್ ಕಚೇರಿ ಮುಂದೆ ಮಾ.26ರಂದು ನಡೆದಿದೆ. ಬಸ್‌ನ ವೇಗದ ಮಿತಿ ಕಡಿಮೆಯಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ಪುತ್ತೂರು ನೆಲ್ಲಿಕಟ್ಟೆ ರಸ್ತೆಗೆ ತಿರುವಿನ ವೇಳೆ ಟಯರ್ ಸ್ಪೋಟಗೊಂಡಿದೆ. ಭಾರಿ ಸದ್ದು ಕೇಳಿದ್ದರಿಂದ ಸ್ಥಳೀಯರು ಹೊರ ಬಂದು ನೋಡಿದಾಗ ಬಸ್‌ನ ಟಯರ್ ಸ್ಪೋಟಗೊಂಡು ರಸ್ತೆಯೆಲ್ಲ ಧೂಳುಮಯವಾಗಿತ್ತು. ತಿರುವು ಮತ್ತು ರಸ್ತೆ ಬದಿಯಲ್ಲಿ ನೀರಿನ ಪೈಪ್ ಕಾಮಗಾರಿ ನಡೆಯುತ್ತಿದ್ದರಿಂದ ಬಸ್‌ನ ವೇಗ ನಿಯಂತ್ರಣ ಕಡಿಮೆಯಲ್ಲಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ವೇಗದಲ್ಲಿರುವಾಗ ಬಸ್ ಟಯರ್ ಸ್ಪೋಟಿಸುತ್ತಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.