ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ನೆಲೆಗಟ್ಟಿನಲ್ಲಿ ನಡೆಯುವ ದೊಂಪದಬಲಿಯು ಮಂಗಳವಾರ ರಾತ್ರಿ ದೇವಳದ ಸಂತೆಗದ್ದೆಯಲ್ಲಿ ಪರಂಪರಗತವಾಗಿ ನಡೆಯಿತು.
ವರ್ಷಾವಧಿ ಜಾತ್ರೋತ್ಸವದ ಕಟ್ಟಕಡೆಯ ಕಾರ್ಯಕ್ರಮವಾಗಿರುವ ಈ ದೊಂಪದ ಬಲಿಯಲ್ಲಿ ದೈವದ ಸೂಚನೆಯಂತೆ ದೇವಳದ ಬ್ರಹ್ಮರಥದ ಕಲಶವನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಬಿ ಗೋಪಾಲಕೃಷ್ಣ ರೈ, ಜಿ. ಕೃಷ್ಣ ರಾವ್ ಆರ್ತಿಲ, ಎಂ. ವೆಂಕಪ್ಪ ಪೂಜಾರಿ, ದೇವಿದಾಸ್ ರೈ ಬಿ., ಸೋಮನಾಥ, ಅನಿತಾ ಕೇಶವ ಗೌಡ, ಡಾ.ರಮ್ಯ ರಾಜಾರಾಮ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ವಿದ್ಯಾಧರ ಜೈನ್, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪ್ರಮುಖರಾದ ಪ್ರವೀಣ್ ಕುಮಾರ್ ಜೈನ್ ಕದಿಕ್ಕಾರುಬೀಡು, ಬಾಲಕೃಷ್ಣ ಶೆಟ್ಟಿ ಕಜೆಕ್ಕಾರು, ಜಗದೀಶ ಶೆಟ್ಟಿ ಕಜೆಕ್ಕಾರು, ಕಂಗ್ವೆ ವಿಶ್ವನಾಥ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್ ಮೊದಲಾದವರು ಭಾಗವಹಿಸಿದ್ದರು.