ಪುತ್ತೂರು: ಬೇಸಿಗೆ ಬಂತೆಂದರೆ ಸಾಕು ಮಕ್ಕಳಿಗೆ ಇನ್ನಿಲ್ಲದ ಖುಷಿ. ಏಕೆಂದರೆ, ಎರಡು ತಿಂಗಳ ರಜೆಯಲ್ಲಿ ಮಜಾ ಮಾಡುತ್ತಾರೆ. ಒಂದಷ್ಟು ಮಕ್ಕಳು ಅಜ್ಜಿ ಮನೆಯೆಂದೆಲ್ಲಾ ಹೇಳಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿ ರಜೆ ಕಳೆದರೆ, ಇನ್ನೊಂದಷ್ಟು ಮಂದಿ ಕ್ರೀಡೆ, ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ತರಬೇತಿ ಶಿಬಿರಗಳಿಗೆ ಸೇರಿಕೊಳ್ಳುತ್ತಾರೆ. ಇಂತಹವರಿಗಾಗಿ ಮೊದಲ ಬಾರಿ ಪುತ್ತೂರಿನ ನೆಹರೂ ನಗರದಲ್ಲಿರುವ ಸುದನಾ ವಸತಿಯುತ ಶಾಲೆಯಲ್ಲಿ ಅವಕಾಶವೊಂದು ತೆರೆದುಕೊಂಡಿದೆ.

ರೋಲಿಂಗ್ ಥಂಡರ್ ವತಿಯಿಂದ ಬೇಸಿಗೆ ಶಿಬಿರ 2025 ಆಯೋಜಿಸಲಾಗಿದ್ದು, ಇದರಲ್ಲಿ ಸ್ಕೇಟಿಂಗ್ ತರಬೇತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಸ್ಕೇಟಿಂಗ್ ಕಲಿಯುವುದನ್ನು ನೋಡಬಹುದು. ಸಣ್ಣಪುಟ್ಟ ಮಕ್ಕಳು ಕೂಡ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿರುತ್ತಾರೆ. ಆದರೆ, ಹಳ್ಳಿ ಪ್ರದೇಶದಲ್ಲಿ ಇದರ ಬಗ್ಗೆ ಆಸಕ್ತಿ ಕಡಿಮೆ. ಆಸಕ್ತರಿಗೆ ಅವಕಾಶಗಳು ಇರುವುದಿಲ್ಲ.
ಇದೀಗ ಪುತ್ತೂರಿನಲ್ಲಿಯೂ ಸ್ಕೇಟಿಂಗ್ ತರಬೇತಿ ಆಯೋಜಿಸಲಾಗಿದ್ದು, 5 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಇದರಲ್ಲಿ ಭಾಗವಹಿಸಬಹುದಾಗಿದೆ. ಹಂತ ಹಂತವಾಗಿ ಬೇಸಿಕ್ ಮತ್ತು ಅಡ್ವಾನ್ಸ್ ತರಬೇತಿಯನ್ನು ನೀಡಲಿದ್ದು, ಫ್ಯಾಮಿಲಿ ಪ್ಯಾಕೇಜ್ ಇದ್ದು, ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರಜ್ಞಾಗಣೇಶ್ ಶೆಣೈ (ಮೊ. 9591050650, 6363324448, 9142252225) ಅವರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ತರಬೇತಿ ಆರಂಭ ಮತ್ತು ಸಮಯ
ಮೊದಲ ತರಬೇತಿಯು ಏ.3 ರಂದು ಆರಂಭಗೊಳ್ಳಲಿದ್ದು, ಏ.13ರ ವರೆಗೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ 10.30ರ ವರೆಗೆ ಹಾಗೂ ಸಂಜೆ 4.30ರಿಂದ 6 ಗಂಟೆ ವರೆಗೆ ತರಬೇತಿ ನಡೆಯಲಿದೆ.

ಸ್ಕೇಟಿಂಗ್ ಪ್ರಯೋಜನಗಳು
ಪೂರ್ಣ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸ್ಕೇಟಿಂಗ್ ಸಹಕಾರಿಯಾಗಿದೆ. ಅಲ್ಲದೆ, ಮನಸ್ಸು ಮತ್ತು ದೇಹ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲಿದ್ದು, ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಜೊತೆಗೆ, ಶಕ್ತಿ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಇವೆಲ್ಲವೂ ಮಕ್ಕಳು ಅಧ್ಯಯನದತ್ತ ಗಮನಹರಿಸಲು ಅನುವು ಮಾಡಿಕೊಡುತ್ತದೆ.