ಎ.1ರಿಂದ ಪಡ್ಡಾಯೂರು ವರುಣ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರ

0

ಪುತ್ತೂರು: ನೆಹರುನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಸಮೀಪದ ಪಡ್ಡಾಯೂರಿನ ಅತ್ಯಾಧುನಿಕ ಶೈಲಿಯ ಒಳಾಂಗಣ ಕ್ರೀಡಾಂಗಣ ವರುಣ್ಸ್ ಶಟಲ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ 1 ತಿಂಗಳ ಕಾಲ ನಡೆಯಲಿರುವ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ ಎ.1ರಿಂದ ಪ್ರಾರಂಭಗೊಳ್ಳಲಿದೆ.

ಎ.1ರಿಂದ ಪ್ರಾರಂಭಗೊಂಡು ಎ.30ರ ತನಕ ನಡೆಯಲಿರುವ ಶಿಬಿರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಎರಡು ಬ್ಯಾಚ್‌ಗಳಲ್ಲಿ ನಡೆಯಲಿದೆ. ಬೆಳಿಗ್ಗೆ 10ರಿಂದ 12 ಗಂಟೆಯ ತನಕ ಹಾಗೂ ಸಂಜೆ 4ರಿಂದ 7 ಗಂಟೆಯ ತನಕ ಶಿಬಿರಗಳು ನಡೆಯಲಿದೆ.

ಪುತ್ತೂರು ಆಸುಪಾಸಿನ ಕ್ರೀಡಾಸಕ್ತರಿಗಾಗಿ ಪಡ್ಡಾಯೂರಿನಲ್ಲಿರುವ ವಿಶಾಲವಾದ ಪ್ರದೇಶಲ್ಲಿ ಸುಮಾರು ಎರಡು ಅಂತಾರಾಷ್ಟ್ರೀಯ ಮಾದರಿ ಮರದ ಕೋರ್ಟ್‌ಗಳನ್ನು ಹೊಂದಿರುವ ಒಳಾಂಗಣ ಕ್ರೀಡಾಂಗಣವು ಆಧುನಿಕತೆ ಪೂರಕವಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಪೂರಕವಾದ ಸುಸಜ್ಜಿತ ಜಿಮ್ ಸೆಂಟರ್, ಒಳಾಂಗಣದಲ್ಲಿ ವಿಶೇಷವಾಗಿ 20 ಅಡಿ ಎತ್ತರದ ಗೋಡೆ ನಿರ್ಮಿಸಿ ಕೂಲಿಂಗ್ ಶೀಟ್‌ಗಳನ್ನು ಅಳವಡಿಸಲಾಗಿದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ವಿಶ್ರಾಂತಿ ಕೊಠಡಿಗಳು, ಶೌಚಾಲಯ, ನೀರಿನ ಸೌಲಭ್ಯ ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ರೂ.70ಲಕ್ಷ ವೆಚ್ಚದಲ್ಲಿ ಈ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದೆ. ನುರಿತ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕ ಸಮಯದಲ್ಲಿ ತರಬೇತಿಗಳನ್ನು ನೀಡಲಾಗುವುದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here