’ಬಿಬಿ ಕಿಡ್’ ಮಕ್ಕಳ ಜವುಳಿ ಮಳಿಗೆ ಶುಭಾರಂಭ

0

ಪುತ್ತೂರು: ಇನ್ನೇನು ಹಬ್ಬ ಹರಿದಿನಗಳು ಸಮೀಪಿಸುತ್ತಿವೆ. ಮನೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹಬ್ಬಕ್ಕೆ ಯಾವೆಲ್ಲಾ ಖಾದ್ಯಗಳನ್ನು ತಯಾರಿಸಿ ಸವಿಯೋಣ ಎಂಬ ಚರ್ಚೆಯ ನಡುವೆ ಯಾವ ವಿನ್ಯಾಸದ ಬಟ್ಟೆಗಳನ್ನು ಧರಿಸಿ ಮಿಂಚೋಣ ಎಂದು ಮಹಿಳಾ ಮಣಿಗಳು, ಅದರಲ್ಲೂ ಮಕ್ಕಳು ಅಮ್ಮನ ಕೈಗೆ ಪಟ್ಟಿಯನ್ನೇ ಕೊಟ್ಟು ಬಿಡುತ್ತಾರೆ. ಇಂತಹದ್ದೇ ಡಿಸೈನ್ ಬೇಕು, ಆ ಬಣ್ಣದಲ್ಲಿ ಈ ಡಿಸೈನಿನ ಬಟ್ಟೆ ಬೇಕೆಂದೆಲ್ಲಾ ಹಠ ಹಿಡಿಯುತ್ತಾರೆ.ಹಾಗಾದರೆ ಮಕ್ಕಳ ಹೇಳುವ ಬಟ್ಟೆಗಳನ್ನು ಹೇಗಪ್ಪಾ ಖರೀದಿಸುವುದು, ಎಲ್ಲಿ ಖರೀದಿಸುವುದು ಎಂಬ ಚಿಂತೆಯಲ್ಲಿದ್ದವರಿಗಾಗಿ ಬಿಬಿ ಕಿಡ್ ಉಡುಪುಗಳ ಮಳಿಗೆ ತೆರೆದುಕೊಂಡಿದೆ.


ಹೌದು, ಪುತ್ತೂರಿನ ಜಾಕಿ ಶೋರೂಂ ಹಿಂಭಾಗದಲ್ಲಿರುವ ಇನ್‌ಲ್ಯಾಂಡ್ ಮಯೂರ ಕಾಂಪ್ಲೆಕ್ಸ್‌ನಲ್ಲಿ ಬಿಬಿ ಕಿಡ್ ಮಳಿಗೆ ಶುಭಾರಂಭಗೊಂಡಿದ್ದು, ಮಕ್ಕಳಿಗೆ ಇಷ್ಟವಾಗುವಂತಹ ವಿವಿಧ ವಿನ್ಯಾಸಗಳ ಉಡುಪುಗಳು ಇಲ್ಲಿ ಲಭ್ಯವಿದ್ದು, ನವನವೀನ ಶೈಲಿಯ ಶೂಗಳನ್ನೂ ಇಲ್ಲೇ ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9008610553, 9008713684ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here