ನಿಡ್ಪಳ್ಳಿ: ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಮನ್ವಿ.ಎಸ್.ಅರ್ ಉತ್ತೀರ್ಣರಾಗಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಬೆಟ್ಟಂಪಾಡಿ ಪ್ರಿಯದರ್ಶಿನಿ ಅಂಗ್ಲ ಮಾಧ್ಯಮ ಶಾಲಾ 5ನೇ ತರಗತಿ ವಿದ್ಯಾರ್ಥಿಯಾಗಿದ್ದ ಮನ್ವಿ ರೆಂಜ ಉನ್ನತಿ ಟ್ಯುಟೋರಿಯಲ್ ನಲ್ಲಿ ಕೋಚಿಂಗ್ ಕ್ಲಾಸ್ ಪಡೆದುಕೊಂಡಿದ್ದರು. ಈಕೆ ನಿಡ್ಪಳ್ಳಿ ಗ್ರಾಮದ ರಾಜಮೂಲೆ ದಿವಂಗತ ಸುರೇಶ್ ನಾಯ್ಕ ಮತ್ತು ವನಿತಾ. ಯಂ ಇವರ ಪುತ್ರಿ.