ಅಕ್ಷಯ ಕಾಲೇಜಿನಲ್ಲಿ ಇಫ್ತಾರ್ ಕೂಟ

0

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಫ್ತಾರ್ ಕೂಟವನ್ನು ಆಚರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು, ಸಂಪ್ಯದ ಮುಸ್ಲಿಂ ಸಮುದಾಯದವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.  ಆದರ್ಶ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ಮಾಲಕ ಅಬ್ದುಲ್ ರಹಮಾನ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಇದೊಂದು ಉತ್ತಮವಾದ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿದೆ ಹಾಗೂ ಸರ್ವಧರ್ಮ ಸಮನ್ವಯ ಎನ್ನುವ ಶೀರ್ಷಿಕೆಯಡಿ ಏಕತೆಯನ್ನು ಸಾರುವ ಜಯಂತ ನಡುಬೈಲು ಇವರ ಯೋಚನೆಯು ಶ್ಲಾಘನೀಯ ಎಂದರು.

ಅಧ್ಯಕ್ಷ ಜಯಂತ ನಡುಬೈಲುರು, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪ ಪ್ರಾಂಶುಪಾಲರಾದ ರಕ್ಷಣಾ ಟಿ ಆರ್, ಕಾಲೇಜು ಸಿಬ್ಬಂದಿ ವರ್ಗ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಂಪ್ಯ ಆಸುಪಾಸಿನ ಸುಮಾರು 100 ಜನ ಈ ಕೂಟದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here