*ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಕಾರ್ಯಾಧ್ಯಕ್ಷ ಸಂಜೀವ ಆಚಾರ್ಯ ಕೆ. ಆರ್, ಗೌರವ ಸಲಹೆಗಾರರಾಗಿ ನಲ್ಕ ಗೋಪಾಲಕೃಷ್ಣ ಆಚಾರ್, ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಅಧ್ಯಕ್ಷ ಸುರೇಂದ್ರ ಆಚಾರ್ಯ ಬಪ್ಪಳಿಗೆ, ಪ್ರ. ಕಾರ್ಯದರ್ಶಿ ಪ್ರಭಾಹರೀಶ್ ಆಚಾರ್ಯ, ಕೋಶಾಧಿಕಾರಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ

ಪುತ್ತೂರು: ದ. ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಕಾರ್ಯಕಾರಿ ಸಮಿತಿ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ನಿಕಟಪೂರ್ವ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಅವರ ಅಧ್ಯಕ್ಷತೆಯಲ್ಲಿ, ಸಂಘದ ಗೌರವ ಸಲಹೆಗಾರರಾದ ನಲ್ಕ ಗೋಪಾಲಕೃಷ್ಣ ಆಚಾರ್ಯ, ಕೆ. ಉದಯ ಕುಮಾರ್ ಆಚಾರ್ಯ ಕೆಮ್ಮಾಯಿ, ಪ್ರೋ. ಪ್ರಭಾಕರ ಆಚಾರ್ಯ ನೆಹರುನಗರ ಅವರು ಉಪಸ್ಥಿತಿಯಲ್ಲಿ ಪುತ್ತೂರು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಮಾ.27ರಂದು ನಡೆಯಿತು.
ಸಂಘದ ನೂತನ ಗೌರವಧ್ಯಕ್ಷರಾಗಿ ಜನಾರ್ದನ ಆಚಾರ್ಯ ಕಾಣಿಯೂರು, ಗೌರವ ಸಲಹೆಗಾರರಾಗಿ ನಲ್ಕ ಗೋಪಾಲಕೃಷ್ಣ ಆಚಾರ್ , ಉದಯ ಕುಮಾರ್ ಆಚಾರ್ಯ ಕೆಮ್ಮಾಯಿ, ಕಾರ್ಯಾಧ್ಯಕ್ಷರಾಗಿ ಸಂಜೀವ ಆಚಾರ್ಯ ಕೆ.ಆರ್, ಅಧ್ಯಕ್ಷರಾಗಿ ಸುರೇಂದ್ರ ಆಚಾರ್ಯ ಬೈಪಾಸ್ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾ ಹರೀಶ್ ಆಚಾರ್ಯ ಪರ್ಲಡ್ಕ, ಕೋಶಾಧಿಕಾರಿಯಾಗಿ ಸಂತೋಷ್ ಆಚಾರ್ಯ ಕಡೇಶ್ವಾಲ್ಯ, ಉಪಾಧ್ಯಕ್ಷರಾಗಿ ಚಂದ್ರಯ್ಯ ಆಚಾರ್ಯ ಅಬೀರ, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಆಚಾರ್ಯ ಕೂರ್ನಡ್ಕ, ಲೆಕ್ಕಪರಿಶೋಧಕರಾಗಿ ಪ್ರಭಾಕರ ಆಚಾರ್ಯ ನೆಹರುನಗರ, ಸಂಘಟನಾ ಕಾರ್ಯದರ್ಶಿಯಾಗಿ ಜಗದೀಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಆಚಾರ್ಯ ಬನ್ನೂರು, ಪ್ರಸಾರ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ ಕಾಣಿಯೂರು, ಧಾರ್ಮಿಕ ಕಾರ್ಯಕ್ರಮ ಸಂಘಟಕರಾಗಿ ಲಿಂಗಪ್ಪ ಆಚಾರ್ಯ ಪೆರುವಾಜೆ, ಗಣೇಶ್ ಆಚಾರ್ಯ ಪುರುಷರಕಟ್ಟೆ, ಗಣೇಶ್ ಆಚಾರ್ಯ ಕುಂಡಡ್ಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಘಟಕರಾಗಿ ವೆಂಕಟರಮಣ ಆಚಾರ್ಯ ಪೆರ್ಲಂಪಾಡಿ, ಚಂದ್ರಶೇಖರ ಆಚಾರ್ಯ ಬನಾರಿ ಅವರನ್ನು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ನಲ್ಕ ಗೋಪಾಲಕೃಷ್ಣ ಆಚಾರ್ಯ, ಉದಯಕುಮಾರ್ ಆಚಾರ್ಯ ಕೆಮ್ಮಾಯಿ, ಪ್ರಭಾಕರ್ ಆಚಾರ್ಯ ನೆಹರುನಗರ, ದಿನೇಶ್ ಆಚಾರ್ಯ ಕೆಯ್ಯೂರು, ಅಶೋಕ್ ಆಚಾರ್ಯ, ವೇದನಾಥ ಆಚಾರ್ಯ, ವೇಣುಗೋಪಾಲ ಆಚಾರ್ಯ ಎ. ವಿ, ಕಿಶೋರ್ ಆಚಾರ್ಯ ಕೆ. ಆರ್, ಪ್ರಶಾಂತ್ ಆಚಾರ್ಯ ಕಾಯರ್ತೊಡಿ, ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾ ಹರೀಶ್ ಆಚಾರ್ಯ ಪರ್ಲಡ್ಕ ವಂದಿಸಿದರು.
ಅಧಿಕಾರ ಹಸ್ತಾಂತರ: ದ. ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು ಅವರು ನೂತನ ಅಧ್ಯಕ್ಷರಾದ ಸುರೇಂದ್ರ ಆಚಾರ್ಯ ಬಪ್ಪಳಿಗೆ ಅವರಿಗೆ ದಾಖಲೆ ಪುಸ್ತಕ ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಲಾಯಿತು.