ಕಡಬ: ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಬೆಳಿಗ್ಗೆ 10ಗಂಟೆಯಿಂದ ಸಂಜೆ ಗಂಟೆ 4.30 ರವರೆಗೆ ಪಡಿತರ ಸಾಮಾಗ್ರಿ ವಿತರಿಸಬೇಕೆಂದು ಬಿಳಿನೆಲೆ ಗ್ರಾಮದ ನಾಗರಿಕರ ವತಿಯಿಂದ ಬಿಳಿನೆಲೆ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಮನವಿ ಸಲ್ಲಿಸಲಾಯಿತು.
ಬಿಳಿನೆಲೆ ಗ್ರಾಮ ಕೇಂದ್ರ ಸ್ಥಾನದಲ್ಲಿ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ 5 ವರ್ಷಗಳಿಂದ ಪಡಿತರೆ ಕಾರ್ಡ್‌ಹೊಂದಿದವರಿಗೆ ಮಧ್ಯಾಹ್ನದವರೆಗೆ ಮಾತ್ರ ಆಹಾರ ಸಾಮಾಗ್ರಿ ವಿತರಿಸುವುದು ಸೀಮಿತವಾಗಿರುವುದರಿಂದ ಗ್ರಾಹಕರಿಗೆ ಅನಾನುಕೂಲವಾಗಿದೆ. ಈಗಾಗಲೇ ನೆಟ್ಟಣ ಹಾಗೂ ಬಿಳಿನೆಲೆ ಭಾಗಗಳಲ್ಲಿ 600ಕ್ಕೂ ಹೆಚ್ಚು ಪಡಿತರೆ ಚೀಟಿ ಗ್ರಾಹಕರು ಹೊಂದಿದ್ದು ಸರ್ವರ್ ಸಮಸ್ಯೆಯಿಂದ ಆಹಾರ ಸಾಮಾಗ್ರಿ ಪಡೆಯಲು ಹರಸಾಹಸ ಪಡಬೇಕಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ತಿಂಗಳ ಕೊನೆಯ ಹಂತದಲ್ಲಿ ರೇಷನ್ ಬರುವುದರಿಂದ ನ್ಯಾಯ ಬೆಲೆ ಅಂಗಡಿಯಲ್ಲಿ ಮಧ್ಯಾಹ್ನದವರೆಗೆ ರೇಷನ್ ವಿತರಣೆ ಮಾಡಿದ್ದಾರೆ. ಇನ್ನೂ ಕೆಲವರು ಸರ್ವರ್‌ಸಮಸ್ಯೆಯಿಂದ ರೇಷನ್ ಪಡೆಯಲಾಗದೆ ಮನೆಗೆ ಹಿಂತಿರುಗಿದ ದಿನಗಳು ಒದಗಿ ಬಂದಿದೆ. ಆದುದರಿಂದ ತಕ್ಷಣ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು ಸೂಕ್ತ ಕ್ರಮ ತೆಗೆದುಕೊಂಡು ಬೆಳಿಗ್ಗೆ ಗಂಟೆ 10ರಿಂದ ಸಂಜೆ 4.30 ರವರೆಗೆ ಆಹಾರ ಸಾಮಾಗ್ರಿ ವಿತರಣೆ ಮಾಡುವಂತೆ ನಿರ್ಣಯ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ್ ಎರ್ಕ, ಸಜಿ ಕುಮಾರ್ ಚೆಂಡ ಹಿತ್ಲು. ಕುಶಾಲಪ್ಪ ಗೌಡ ಬೈಲು, ದಿನಕರ ಪುರಿಕೆರೆ, ಪೌಲೋಸ್ ಚೆಂಡ ಹಿತ್ತಿಲು, ರವೀಂದ್ರ ಕಳಿಗೆ, ಭವ್ಯ ಆನಂದ ಗೌಡ ಚಿದ್ಗಲ್, ಮದು ಚಂದ್ರ ಚಿದ್ಗಲ್, ಪೂವಪ್ಪ ಗೌಡ ಮೆರೊಂಜಿ ಉಪಸ್ಥಿತರಿದ್ದರು. ಬಿಳಿನೆಲೆ ಪಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಮೇಶ್ ವಾಲ್ತಾಜೆ ಸಹಕರಿಸಿದರು.