ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ರೋಟರಿ ಕ್ಲಬ್ ಯುವ, ಜೆಸಿಐ ಪುತ್ತೂರು, ಮಲ್ಪೆಯ ಮಧ್ವರಾಜ್ ಟ್ರಸ್ಟ್ ವತಿಯಿಂದ ಮನೆಯ ಶ್ವಾನಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ನರಿಮೊಗರು ಸಿ.ಎ ಬ್ಯಾಂಕ್ ಸಭಾಭವನ ಪುರುಷರಕಟ್ಟೆಯಲ್ಲಿ ಸಂಜೆ ೪ಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರಿಂದ ಗ್ರಾಮ ವಾಸ್ತವ್ಯ, ಕಾರ್ಯಕರ್ತರ ಭೇಟಿ
ಕೆದಿಲ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಅನಂತಾಡಿ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮಸಭೆ
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಹಸಿರುವಾಣಿ ಸಮರ್ಪಣೆ, ರಾತ್ರಿ ೭ರಿಂದ ನೃತ್ಯಾರ್ಪಣಾ, ೮ಕ್ಕೆ ಧ್ವಜಾರೋಹಣ, ಬಲಿ ಹೊರಟು ಉತ್ಸವ, ನೃತ್ಯ ನಿನಾದ, ಅನ್ನಸಂತರ್ಪಣೆ, ೯.೩೦ರಿಂದ ಸಂಗೀತ ಗಾನ ಸಂಭ್ರಮ
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದಂಡನಾಯಕ ದೈವಗಳ ಭಂಡಾರ ನನ್ಯಕ್ಕೆ ಹೋಗುವುದು
ಕಾವು ಮಾಡ್ನೂರು ಬರೆಕರೆ ಮನೆಯ್ಲಲ್ಲಿ ಸಂಜೆ ಕಟೀಲು ಮೇಳದ ಯಕ್ಷಗಾನ-ಶ್ರೀ ಮಹಾದೇವೀ ಲಲಿತೋಪಾಖ್ಯಾನ
ಚಾರ್ವಾಕ ಶ್ರೀ ಕ್ಷೇತ್ರ ಕೆಳಗಿನಕೇರಿ ಕೊಪ್ಪದಲ್ಲಿ ಬೆಳಿಗ್ಗೆ ೮ಕ್ಕೆ ನಾಗಬ್ರಹ್ಮ ಸಾನಿಧ್ಯದಲ್ಲಿ ತಂಬಿಲ, ಗಣಹೋಮ, ಕೊಪ್ಪ ಭಂಡಾರದ ಮನೆಯಲ್ಲಿ ನವಕ ಕಲಶಾಭಿಷೇಕ, ರಾತ್ರಿ ೮ಕ್ಕೆ ಕೊಪ್ಪ ಪಾಜೋವುತ್ತಡ್ಕ ಮಾಲ್ಯದಿಂದ ಭಂಡಾರ ತೆಗೆಯುವುದು, ೯ಕ್ಕೆ ಅನ್ನಸಂತರ್ಪಣೆ
ಕಾಣಿಯೂರಿನಲ್ಲಿ ಬೆಳಿಗ್ಗೆ, ಸವಣೂರು ಪೇಟೆಯಲ್ಲಿ ಮಧ್ಯಾಹ್ನ ಬಿ.ಎಸ್.ಎನ್.ಎಲ್ ವತಿಯಿಂದ ಬಿಎಸ್‌ಎನ್‌ಎಲ್ ಸಿಮ್ ಮೇಳ
ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಟ್ರಸ್ಟ್ ವತಿಯಿಂದ ತರವಾಡು ದೈವ ದೇವರ ವಾರ್ಷಿಕ ಕಾರ್ಯಕ್ರಮದ ಗೊನೆ ಮುಹೂರ್ತ, ಆಮಂತ್ರಣ ಪತ್ರ ಬಿಡುಗಡೆ
ಬದನಾಜೆ ಕುಂದರ್ ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೮ರಿಂದ ತಿಲಹೋಮ, ವೈದಿಕ ಕಾರ್ಯಕ್ರಮ, ೧೦ರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ
ಮೊಟ್ಟೆತ್ತಡ್ಕ ಮಜಲುವಿನಲ್ಲಿ ಸಂಜೆ ೬ರಿಂದ ಕುಟುಂಬದ ಧರ್ಮದೈವದ ಧರ್ಮನೇಮ