ಗೃಹರಕ್ಷಕ ಅಧಿಕಾರಿ ತರಬೇತಿ : ಪುತ್ತೂರು ಘಟಕದ ಸಿಬ್ಬಂದಿ ಕೇಶವ ಎಸ್ ರವರಿಗೆ ಚಿನ್ನದ ಪದಕ

0

ಪುತ್ತೂರು: ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಅಕಾಡೆಮಿ ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕ ಅಧಿಕಾರಿ ತರಬೇತಿಯಲ್ಲಿ ಪುತ್ತೂರು ಘಟಕದ ಸಿಬ್ಬಂದಿ ಕೇಶವ ಎಸ್ ರವರು ಚಿನ್ನದ ಪದಕವನ್ನು ಪಡೆದುಕೊಂಡರು.

ಪುತ್ತೂರು ಮಹಿಳಾ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಗುರುತಿಸಿ ಜೆ.ಕೆ ರಶ್ಮಿ ಐಪಿಎಸ್ ರವರು ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಸಿಬ್ಬಂದಿ ಆಯ್ಕೆಯಾಗಿದ್ದು ಸುಮಾರು 26 ದಿನಗಳ ತರಬೇತಿಯಲ್ಲಿ ಕೇಶವ ಎಸ್ ರವರು ವಿವಿಧ ಪರೀಕ್ಷೆಗಳನ್ನು ಸಮಗ್ರವಾಗಿ ಎದುರಿಸಿ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.

ಈ ಹಿಂದೆ ಪುತ್ತೂರು ನಗರ ಸಂಚಾರ ಗ್ರಾಮಾಂತರ ಕಡಬ ಉಪ್ಪಿನಂಗಡಿ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಹಿಳಾ ಠಾಣೆ ಪುತ್ತೂರುನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ಘಟಕದ ಸಿಬ್ಬಂದಿಯಾದ ಇವರು ಇಲಾಖೆಗೆ ಸೇರಿ ಸುಮಾರು 9 ವರ್ಷಗಳ ಸೇವೆಯಲ್ಲಿ ಗ್ರಾ.ಪಂ ತಾ.ಪಂ ಜಿಲ್ಲಾ.ಪಂ ವಿಧಾನಸಭೆ ಲೋಕಸಭೆ ಚುನಾವಣೆ ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯ ಚುನಾವಣೆ ಕರ್ತವ್ಯ ನಿರ್ವಹಿಸಿರುವ ಇವರು ಸುದ್ದಿ ಆನ್ಲೈನ್ ವೋಟಿಂಗ್ ಮೂಲಕ ಪ್ರಥಮ ಸ್ಥಾನ ಪಡೆದು ನಾಗರಿಕರಿಂದಲೂ ಗುರುತಿಸಲ್ಪಟ್ಟಿದ್ದರು ಇವರು ಪ್ರಸ್ತುತ ಮುಂಡೂರು ಗ್ರಾಮದ ಕಾಲಿಂಗ ಹಿತ್ಲು ಎಂಬಲ್ಲಿ ವಾಸ್ತವ್ಯವನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here